Ad imageAd image

ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲ ಪದಾಧಿಕಾರಿಗಳ ಪದಗ್ರಹಣ!

Bharath Vaibhav
ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲ ಪದಾಧಿಕಾರಿಗಳ ಪದಗ್ರಹಣ!
WhatsApp Group Join Now
Telegram Group Join Now

ಸಿಂಧನೂರು : ಆಗಸ್ಟ್ ೯ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಸಿಂಧನೂರು ನಗರ ಹಾಗೂ ಗ್ರಾಮೀಣ ಮಂಡಲಗಳ ನೂತನ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಭಾರತೀಯ ಜನತಾ ಪಕ್ಷದ ವತಿಯಿಂದ ಜರಗಿತು.

ನಗರದ ಆದಿಶೇಷ ದೇವಸ್ಥಾನದಿಂದ ತಿರಂಗ ಯಾತ್ರೆ ಬೈಕ್‌ ರ್ಯಾಲಿ ಪ್ರಾರಂಭವಾಗಿ ಬಸ್ ನಿಲ್ದಾಣದ ಮೂಲಕ ಕನಕದಾಸ ಕಲ್ಯಾಣ ಮಂಟಪಕ್ಕೆ ಸಾಗಿತು ನಂತರ ಪ್ರಾಸ್ತಾವಿಕವಾಗಿ ಸಿದ್ದರಾಮೇಶ್ ಮನ್ನಪುರು ಮಾತನಾಡಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಕೆ.ಕರಿಯಪ್ಪ ಅವರು ಸ್ವಂತ ಮನೆಯ ಸದಸ್ಯನಂತೆ ನನ್ನನ್ನು ನೋಡಿ ಕೊಂಡಿದ್ದಾರೆ.

ನಾನು ಅಧಿಕಾರ ಬಯಸಿಲ್ಲ ಉತ್ತಮ ಕೆಲಸದಿಂದ ಸ್ಥಾನಮಾನಗಳು ಸಿಗತ್ತವೆ ಎನ್ನುವುದಕ್ಕೆ ನಾನೇ ಸಾಕ್ಷಿ ನಾವು ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುವುದರ ಮೂಲಕ 2028 ರ ಚುನಾವಣೆಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆ. ಕರಿಯಪ್ಪ ಅಣ್ಣನವರನ್ನು ಮಾಡಲು ನಾವು ಸಿದ್ದರಾಗೋಣ ಮತ್ತು ಪ್ರಧಾನಿ ಮೋದಿಯವರ ಜನಪರ ರೈತಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಕೆ.ಮರಿಯಪ್ಪ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಒಬಿಸಿ ರಾಜ್ಯ ಕಾರ್ಯದರ್ಶಿ ಕೆ.ವೆಂಕಟೇಶ, ಸಿರಾಜ್ ಪಾಷಾ.ಯಂಕಣ್ಣ ಜೋಷಿ.ಜೆ. ರಾಯಪ್ಪ ವಕೀಲ, ಗ್ರಾಮೀಣ ಘಟಕ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ಒಬಿಸಿ ಮೋರ್ಚ ಜಿಲ್ಲಾಧ್ಯಕ್ಷ ಕೆ.ಹನುಮೇಶ, ಮಸ್ಕಿ ಶರಣಯ್ಯ ಸೊಪ್ಪಿಮಠ,ಯಂಕನಗೌಡ ಮಲ್ಕಾಪುರ,ನಿರುಪಾದೆಪ್ಪ ಜೋಳದರಾಶಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!