Ad imageAd image

ಬಿಜೆಪಿ ಏನೆ ತಿಪ್ಪರಲಾಗ ಹಾಕಿದರು ಮುಂದೆ ನಾವೇ ಗೆಲ್ಲುತ್ತೇವೆ : ಸಿದ್ದರಾಮಯ್ಯ 

Bharath Vaibhav
ಬಿಜೆಪಿ ಏನೆ ತಿಪ್ಪರಲಾಗ ಹಾಕಿದರು ಮುಂದೆ ನಾವೇ ಗೆಲ್ಲುತ್ತೇವೆ : ಸಿದ್ದರಾಮಯ್ಯ 
siddaramaiah
WhatsApp Group Join Now
Telegram Group Join Now

ಮಂಡ್ಯ : ರಾಜ್ಯ ಸರ್ಕಾರ ರಸಗೊಬ್ಬರ ತಯಾರಿಸಲ್ಲ ಕೇಂದ್ರದ ಬಳಿ ಕೊಡಿಸಲಿ ಬಿಜೆಪಿ ಏನೆ ತಿಪ್ಪರಲಾಗ ಹಾಕಿದರು ಮುಂದೆ ನಾವೇ ಗೆಲ್ಲುತ್ತೇವೆ. ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಚ್ ಡಿ ಕುಮಾರಸ್ವಾಮಿ ಕೇಂದ್ರದಲ್ಲಿ ಪ್ರಬಲ ಖಾತೆ ಹೊಂದಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಕೇಂದ್ರದ ಬಳಿ ರಸಗೊಬ್ಬರ ಕೊಡಿಸಲಿ ಎಂದು ಮದ್ದೂರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ಸ್ಟಾಕ್ ಇಲ್ಲ ಎಂದು ಅಂಗಡಿಗಳು ಬೋರ್ಡ್ ಹಾಕಿಕೊಂಡಿದ್ದು ಈ ಕುರಿತು ರೈತರು ಹಾಗೂ ಬಿಜೆಪಿ ರಾಜ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಈಗ ರಸಗೊಬ್ಬರದ ಅಭಾವ ಇಲ್ಲ ಆದರೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬ ಕೊಡಲು ಕೇಂದ್ರದಿಂದ ಆಗಿಲ್ಲ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ 6 ಲಕ್ಷ ಮೆಟ್ರಿಕ್ ಟನ್ ರಸ ಗೊಬ್ಬರದ ಬೇಡಿಕೆ ಇತ್ತು ಕೇಂದ್ರ ಸರ್ಕಾರ 5.27 ಮಾತ್ರ ನಮಗೆ ಕೊಟ್ಟಿದೆ.

ಈ ಕುರಿತು ನಾವು ವಿಜಯೇಂದ್ರನಿಂದ ಪಾಠ ಕಲಿಯಬೇಕಾ? ಅವರಪ್ಪ ಸಿಎಂ ಆಗಿದ್ದಾಗ ಗೋಲಿಬಾರ್ ಮಾಡಿ ರೈತರನ್ನು ಸಾಯಿಸಿದರು. ಹಾವೇರಿಯಲ್ಲಿ ಗೋಲಿಬಾರ್ ಮಾಡಿ ರೈತರ ಸಾಯಿಸಿದರು. ನಿಮಗೆ ನಾಚಿಕೆ ಆಗಲ್ವಾ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!