ಬೆಳಗಾವಿ: ಹೌದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂದು ಬಿಜೆಪಿ ಯುವ ನಾಯಕ ಚೇತನ್ ಅಂಗಡಿಯವರ 36 ನೇ ವರ್ಷದ ಹುಟ್ಟುಹಬ್ಬ ಹಾಗೂ ಮಾನ್ಯ ದಿ. ಸುರೇಶ್ ಅಂಗಡಿಯವರ ಜೂನ್ 1 ಹುಟ್ಟುಹಬ್ಬದ ಪ್ರಯುಕ್ತ ಡಾ ರವಿ ಪಾಟೀಲ್ ಆರ್ತೋ ಹಾಗೂ ಇಶಾನ ಫೌಂಡೇಶನ್ ಸಹಯೋಗದಲ್ಲಿ ಇಂದು ಹಿರೇಬಾಗೇವಾಡಿ ಭಾಗದ ಜನತೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಔಷಧಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದಿ. ಸುರೇಶ್ ಅಂಗಡಿಯವರ ಹುಟ್ಟೂರು ಕೆ.ಕೆ ಕೊಪ್ಪ ಗ್ರಾಮದ ಪ್ರೌಢಶಾಲೆಯಲ್ಲಿ ಮಾಜಿ ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಗಿಡ ನೆಡುವ ಕಾರ್ಯಕ್ರಮ ವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಬಿಜೆಪಿ ಯುವ ನಾಯಕ ಚೇತನ್ ಅಂಗಡಿ ಅಭಿಮಾನಿಗಳು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರ ಸಂವಾದದಲ್ಲಿ ಮಾತನಾಡಿದರು.
ಕೇಕೆ.ಕೊಪ್ಪ ಗ್ರಾಮದ ತಾನು ಕಲಿತ ಸರ್ಕಾರಿ ಪ್ರೌಢಶಾಲೆಗೆ ಮುಂಬರುವ ದಿನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ತೆಗೆದುಕೊಂಡು ಬರುವುದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಬರ್ತ್ ಡೇ ಬಾಯ್ ಚೇತನ್ ಅಂಗಡಿ ಹೇಳಿದರು. ಇದೇ ಸಂದರ್ಭದಲ್ಲಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ಕಾಲೇಜು ಪ್ರಾಚಾರ್ಯರ ವತಿಯಿಂದ ಚೇತನ್ ಅಂಗಡಿಯವರನ್ನು ಸನ್ಮಾನ ಮಾಡಲಾಯಿತು. ಒಟ್ಟಾರೆ ಸಮಾಜ ಪರ ಕಾರ್ಯಕ್ರಮಗಳ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಚೇತನ್ ಅಂಗಡಿಯವರ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿವೆ.
ವರದಿ: ಬಸವರಾಜು




