ಹುಕ್ಕೇರಿ :- ಮುಂಬರುವ ಲೋಕಸಭಾ ಚುನಾವಣೆಯ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಚಾರ ನಿಮಿತ್ತ ಇಂದು ಹುಕ್ಕೇರಿ ನಗರಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಆಗಮಿಸಿದರು
ಈ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಅವರು ಮಾತನಾಡಿ ಈ ಚುನಾವಣೆ ಕೇವಲ ಅಣ್ಣಾಸಾಹೇಬ ಜೊಲ್ಲೆ ಹಾಗೂ ನರೇಂದ್ರ ಮೋದಿ ಅವರ ಚುನಾವಣೆ ಅಲ್ಲದೆ ನಮ್ಮ ಭಾರತ ದೇಶದ ರಕ್ಷಣೆಗಾಗಿ ಈ ಚುನಾವಣೆ ಆದ ಕಾರಣ ತಾವೆಲ್ಲರೂ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡುವುದರ ಮುಖಾಂತರ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸುವ ಕಾರ್ಯ ಮಾಡೋಣ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ರಮೇಶ್ ಕತ್ತಿ, ನಿಖಿಲ್ ಕತ್ತಿ, ರಾಜೇಶ್ ನೆರ್ಲಿ, ದುರ್ಯೋಧನ ಐಹೊಳೆ, ಈರಣ್ಣ ಕಡಾಡಿ, ಸತೀಶ್ ಅಪ್ಪಾಜಿಗೊಳ್, ಮಹಾಂತೇಶ್ ಕವಟಿಗಿಮಠ, ವಿವೇಕ್ ರಾವ್ ಪಾಟೀಲ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಹಲವಾರು ನಾಯಕರು ಬಿಜೆಪಿ ಪಕ್ಷದ ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ. ಶಾಂತಿನಾಥ ಜಿ ಮಗದುಮ್ಮ