Ad imageAd image

ಬಿಜೆಪಿ ಪಕ್ಷದ ನೂತನ ನಗರ ಹಾಗೂ ಗ್ರಾಮೀಣ ಅಧ್ಯಕ್ಷರ ಪದಗ್ರಹಣ!

Bharath Vaibhav
ಬಿಜೆಪಿ ಪಕ್ಷದ ನೂತನ ನಗರ ಹಾಗೂ ಗ್ರಾಮೀಣ ಅಧ್ಯಕ್ಷರ ಪದಗ್ರಹಣ!
WhatsApp Group Join Now
Telegram Group Join Now

ಸಿಂಧನೂರು : ಆಗಸ್ಟ್ 8 ರಂದು ಬಿಜೆಪಿ ಪಕ್ಷದಿಂದ ಆಗಸ್ಟ್ 9 ರಂದು ನಗರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ನಗರದ ಕುಷ್ಟಗಿ ರಸ್ತೆಯ ಕನಕದಾಸ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪೂರು ತಿಳಿಸಿದರು.

ನಂತರ ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಆಗಸ್ಟ್ 9 ರಂದು ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಅಂದಿನ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರಾದ ಸಿಟಿ. ರವಿ, ಅರವಿಂದ ಬೆಲ್ಲದ್, ಸೇರಿದಂತೆ ಅನೇಕ ಮುಖಂಡರು ಬರುವ ನಿರೀಕ್ಷೆ ಇದೇ ಹಾಗೂ ಸ್ಥಳೀಯರಾದ ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಅಮರೇಗೌಡ ವಿರುಪಾಪುರ, ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು, ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿ ಆಗಸ್ಟ್ 9 ರಂದು ಮುಂಜಾನೆ ನಗರದ ಆದೀಶೇಷ ದೇವಸ್ಥಾನದಿಂದ ನೂರಾರು ಬೈಕುಗಳ ರ್ಯಾಲಿ ಮೂಲಕ ತಿರಂಗ ಜಾಥಾ ಮಾಡಲಾಗುವುದು ಅಲ್ಲದೆ ಅಂದು ರಕ್ಷಾ ಬಂಧನ ಕಾರ್ಯಕ್ರಮ ಇರುವುದರಿಂದ ಪಕ್ಷದ ಮಹಿಳಾ ಮುಖಂಡರಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯುತ್ತದೆ ನಂತರ ಅದೇ ದಿನ ನೂಲಿ ಚಂದಯ್ಯ ಜಯಂತಿ ಇರುವುದರಿಂದ ಜಯಂತಿ ಆಚರಣೆ ಮಾಡಿ ಆ ಸಮಾಜದ ಮುಖಂಡರನ್ನು ವೇದಿಕೆಯ ಮೇಲೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ ತಿಳಿಸಿದರು.

ಈ ವೇಳೆ ಬಿಜೆಪಿ ಮುಖಂಡ ಎಂ.ದೊಡ್ಡಬಸವರಾಜ ಪಕ್ಷದ ನಗರ ಎಸ್ ಟಿ ಘಟಕದ ಅಧ್ಯಕ್ಷ ಮಹಾದೇವ ನಾಯಕ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ, ಮುಖಂಡರಾದ ಗಂಗಾಧರ ಹೂಗಾರ, ಚಿದಾನಂದಪ್ಪ ಜವಳಗೇರಾ, ಸಿರಾಜ್ ಪಾಷಾ, ಇದ್ದರು ಇನ್ನು ಅನೇಕರಿದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!