27 ವರ್ಷಗಳ ನಂತರ ಭಾರತೀಯ ಜನತಾ ಪಕ್ಷ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಜಯದ ಸಂಭ್ರಮವನ್ನು ಇಂದು ಸಂಜೆ ಭಾರತೀಯ ಜನತಾ ಪಕ್ಷ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯದ ಘೋಷಣೆಗಳನ್ನು ಕೂಗಿದರು. ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಎನ್. ಶಂಕ್ರಪ್ಪ ವಕೀಲರು ಮಾತನಾಡುತ್ತ ಇಂದಿನ ಫಲಿತಾಂಶ ನಿಜಕ್ಕೂ ಐತಿಹಾಸಿಕ ಗೆಲವು ತಂದಿದೆ ದಶಕಗಳ ನಂತರ ಬಿಜೆಪಿ ದೆಹಲಿ ಗದ್ದುಗೆ ಹಿಡಿದಿದ್ದು ಈ ಗೆಲವಿಗೆ ದೆಹಲಿ ಮತದಾರರಿಗೆ ಮತ್ತು ಅಲ್ಲಿನ ಸಂಘಟಿತ ಕಾರ್ಯಕರ್ತರಿಗೆ ಹಾಗೂ ರಾಷ್ಟ್ರೀಯ ನಾಯಕರುಗಳಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ ಶಾ ಹಾಗು ಎಲ್ಲಾ ನಾಯಕರುಗಳಿಗೆ ಸಲ್ಲುತ್ತದೆ. ಹೊಸ ದಿಕ್ಸೂಚಿ ದೆಹಲಿ ಜನರು ಕೊಟ್ಟಿದ್ದು ನಮಗೂ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ, ಸಂತೋಷ ರಾಜಗುರು, ನಗರ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಸಜ್ಜನ, ಪಲುಗುಲ ನಾಗರಾಜ, ನಗರಾಭಿವೃದ್ಧಿ ಮಾಜಿ ಅಧ್ಯಕ್ಷರುಗಳಾದ ರಾಜಕುಮಾರ, ವೈ.ಗೋಪಾಲ ರೆಡ್ಡಿ, ಶಿವ ಬಸ್ಸಪ್ಪ ಮಾಲೀ ಪಾಟೀಲ,ಭಂಗಿ ನರಸರೆಡ್ಡಿ, ನಗರ ಸಭೆ ಸದಸ್ಯರಾದ ಮಹೇಂದ್ರ ರೆಡ್ಡಿ, ಮಾಜಿ ನಗರ ಸಭೆ ಸದಸ್ಯರಾದ ಮಂಚಾಲ ಭೀಮಯ್ಯ , ಮುಖಂಡರಾದ ಯು. ನರಸರೆಡ್ಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎನ್. ವಿನಾಯಕ ರಾವ್, ನಗರ ಅಧ್ಯಕ್ಷ ಯು. ರಾಜಶೇಖರ, ಎಸ್.ಟಿ.ಮೋರ್ಚಾ ಅಧ್ಯಕ್ಷ ಸುರೇಶ ಬಾಬು , ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗವೇಣಿ, ಎಸ್.ಸಿ.ಮೋರ್ಚಾ ಅಧ್ಯಕ್ಷ ಜೆ.ಎಂ.ಮೌನೇಶ, ಮುಖಂಡರುಗಳಾದ ನರಸಪ್ಪ ಯಕ್ಲಾಸಪೂರು, ಮುಕ್ತಿಯಾರ, ಶಿವಕುಮಾರ ಪೋಲೀಸ್ ಪಾಟೀಲ, ಆಲೂರು ವೆಂಕಟೇಶ, ಸುಲೋಚನಾ ಸ್ವಾಮಿ, ಎ. ಚಂದ್ರಶೇಖರ, ಶಿವಲಕ್ಷ್ಮೀ ನಾಯಕ, ಪ್ರದೀಪ ಸಾನಬಾಳ, ಹನೀಫ್ , ನಿವೇದಿತಾ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಿದ್ದರು.
ವರದಿ: ಗಾರಲ ದಿನ್ನಿ ವೀರನ ಗೌಡ




