ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದ ಮಹಿಳೆಯನ್ನು ಬಂಧಿಸಿರುವ ಘಟನೆ ನಡೆದಿದೆ. ಬೆಂಗಳೂರು ಸಿಸಿಬಿ ಪೊಲೀಸರು ಚಿಕ್ಕಮಗಳೂರು ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ.
ಸ್ಪೂರ್ತಿ ಬಂಧಿತ ಮಹಿಳೆ. ಸ್ವಾಮೀಜಿಯಿಂದ ಈಗಾಗಲೇ ಮಹಿಳೆ 4.5 ಲಕ್ಷ ಹಣ ವಸೂಲಿ ಮಾಡಿದ್ದಳು.ಬಳಿಕ ೧ ಕೋಟಿ ರೂಪಾಯಿಗೆ ಮತ್ತೆ ಬೇಡಿಕೆ ಇಟ್ಟಿದ್ದಳು.
5 ತಿಂಗಳ ಹಿಂದೆ ಮಹಿಳೆ ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಸ್ವಾಮೀಜಿಗೆ ಪರಿಚಯಿಸಿಕೊಂಡಿದ್ದಳು. ಹೀಗೆ ಆರಂಭವಾದ ಪರಿಚಯದಲ್ಲಿ ಮಹಿಳೆ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಾಳೆ.
ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದಾಗ ಆರೋಪಿ ಮಹಿಳೆ ಸ್ವಾಮೀಜಿಯಿಂದ 4.5 ಲಕ್ಷ ಹಣ ಪಡೆದಿದ್ದಳು. ಪದೇ ಪದೇ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಹಿಳೆ 1 ಕೋಟಿ ರೂಪಾಯಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.
ಮಹಿಳೆಯ ಕಾಟಕ್ಕೆ ಬೇಸತ್ತ ಸ್ವಾಮೀಜಿ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದೇ ಸ್ವಾಮೀಜಿ ವಿರುದ್ಧ ಎರಡು ವರ್ಷಗಳ ಹಿಂದೆ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಈ ವೇಳೆ ಆರೋಪಿಗಳು 6 ಕೋಟಿ ರೂಪಾಯಿಗೆ ಬೇಡಿ ಇಟ್ಟಿದ್ದರು.
ಈ ಬಗ್ಗೆಯೂ ಪ್ರಕರಣ ದಾಖಲಾಗಿತ್ತು. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಅದೇ ಸ್ವಾಮೀಜಿಗೆ ಮತ್ತೆ ಮಹಿಳೆಯೊಬ್ಬಳಿಂದ ಬ್ಲ್ಯಾಕ್ ಮೇಲ್ ನಡೆದಿದೆ.




