ಬೆಳಗಾವಿ : ರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ ಮತ್ತೆ ಎರಡು ಕೃಷ್ಣಮೃಗಗಳು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಮೂಲಕ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಎರಡು ಕೃಷ್ಣಮೃಗಗಳು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಇನ್ನು ಮೃಗಾಲಯದಲ್ಲಿ ಕೃಷ್ಣಮೃಗಗಳಿಗೆ ಗಳಲೆ ಬ್ಯಾಕ್ಟೀರಿಯಾ ಅಂಟಿರುವ ಹಿನ್ನಲೆ ಅವುಗಳು ಸಾವನ್ನಪ್ಪುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಹಸು ಎಮ್ಮೆಗಳಿಗೆ ಕಾಣಿಸುವ ರೋಗ ಈಗ ಕೃಷ್ಣಮೃಗಗಳಲ್ಲಿಗೂ ವ್ಯಾಪಿಸಿದೆ, ಇದರಿಂದ ಅವುಗಳು ಬಹಳ ಬೇಗ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಿದೆ. ಮೃಗಾಲಯದಲ್ಲಿ ಉಳಿದಿರುವ ಕೃಷ್ಣಮೃಗಗಳ ಜೀವಿತವೂ ಗಂಭೀರ ಅಪಾಯದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




