ಸೇಡಂ: ಕರ್ನಾಟಕ ಸರ್ಕಾರ ಗ್ರಾಮೀಣಭಿವೃದ್ಧಿ ಪಂಚಾಯತ ರಾಜ್ಯ ಹಾಗೂ ಐಟಿಬಿಟಿ ಸಚಿವರಾದ ಪ್ರೀಯಾಂಕ ಎಂ ಖರ್ಗೆ ಅವರ 47ನೇ ಹುಟ್ಟು ಹಬ್ಬದ ಪ್ರಯುಕ್ತ ಸೇಡಂ ನಗರದ ಬಸ್ ಸ್ಟಾಂಡ ಹತ್ತಿರ ಹಾಗೂ ಅಂಬೇಡ್ಕರ ಮೂರ್ತಿ ಆವರಣದಲ್ಲಿ ಪ್ರೀಯಾಂಕ ಖರ್ಗೆ ಅಭಿಮಾನಿ ಬಳಗ ಸೇಡಂ ವತಿಯಿಂದ ಅನ್ನದಾನ ಸಂತಪರ್ಣೆ ಹಾಗೂ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿ ಆಚರಿಸಲಾಯಿತು.
ಈ ವೇಳೆಯಲ್ಲಿ ಕೃಷಿ ರಾಜ್ಯ ಪ್ರತಿನಿಧಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವರಾಜ ಆರ್ ಪಾಟೀಲ ಅನ್ನದಾನ ಸಂತಪರ್ಣೆ ಚಾಲನೆ ನೀಡದರು.
ಈ ಸಮಯದಲ್ಲಿ ಬ್ಲಾಕ್ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ, ಜೈ ಭೀಮ ಊಡಗಿ, ಜಗನ್ನಾಥ ಚಿಂತಪಳ್ಳಿ, ಶ್ರೀಕಾಂತ ಜಾಪನೂರ, ವಿಲಾಸ ಗೌತಂ ನಿಡಗುಂದಾ, ಪ್ರಶಾಂತ ಸೇಡಮಕರ್, ಅರುಣಕುಮಾರ ಮೂಡಬೂಳಕರ್, ಪ್ರಶಾಂತ ಕೋಂಕನಳ್ಳಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




