ಯಳಂದೂರು: ಬೋಧಿಶತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪರೀ ನಿಬ್ಬಾಣ ದಿನದ ಅಂಗವಾಗಿ ಮಹಾವನ ಬುದ್ಧ ವಿಹಾರ ನಿರ್ಮಾಣ ಮತ್ತು ನಿರ್ವಹಣೆ ಸಮಿತಿ ಯಳಂದೂರು. ವೈದ್ಯಕೀಯ ಆಸ್ಪತ್ರೆ ಮತ್ತು ಬೋಧನಾ ಸಂಸ್ಥೆ ಚಾಮರಾಜನಗರ ಹಾಗೂ ಸರ್ಕಾರಿ ಆಸ್ಪತ್ರೆ ಯಳಂದೂರು ಇವರ ಸಂಯುಕ್ತಶ್ರಯದಲ್ಲಿ ರಕ್ತದಾನ- ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಅನ್ನದಾನ ಕಾರ್ಯಕ್ರಮವನ್ನು ಹೊನ್ನೂರು ಗ್ರಾಮದ ಭೀಮರಾವ್ ರಾಮ್ ಜಿ ಅಂಬೇಡ್ಕರ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಸರ್ವ ಜನರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮಹಾವನ ಬುದ್ಧ ವಿಹಾರ ನಿರ್ಮಾಣ ಮತ್ತು ನಿರ್ವಹಣೆ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ ಮಹಾವನ ಬುದ್ಧ ವಿಹಾರದ ಪ್ರಧಾನ ಬಿಕ್ಕುಗಳಾದ ಬಂತೆ ಬುದ್ಧ ರತ್ನ ರವರು ಮಾತನಾಡಿ ಆಧುನಿಕ ಭಾರತದ ನಿರ್ಮಾತೃ ವಿಶ್ವಕಂಡ ಏಕೈಕ ಜ್ಞಾನ ಶಿಖರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ದೀನ ದಲಿತರ ಏಳಿಗೆಗಾಗಿ ಸಮಾನತೆಯ ಸಾಕಾರಕ್ಕಾಗಿ ತಮ್ಮ ಇಡೀ ಜೀವಮಾನವನ್ನು ಮುಡುಪಾಗಿಟ್ಟ ಮಹಾನ್ ಮಾನವತವಾದಿ, ಇಂದು ನಾವು ಏನೆಲ್ಲಾ ಅಧಿಕಾರ ಸಂಪತ್ತು ಗೌರವ ಹಾಗೂ ಸರ್ವ ಸುಖವನ್ನು ಅನುಭವಿಸುತ್ತಿದ್ದೆವು ಇವೆಲ್ಲವೂ ಅಂದು ಬಾಬಾ ಸಾಹೇಬರು ತಮ್ಮ ಜೀವವನ್ನುಒತ್ತೆ ಇಟ್ಟ ಪ್ರತಿಫಲ, ಇಂದು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿದೆ,
ಇಂತಹ ಮಹಾನ್ ಚೇತನಕ್ಕೆ ನಾವು ಯಾವ ರೀತಿಯಿಂದಲೂ ಗೌರವ ಆದರಗಳನ್ನು ಸಲ್ಲಿಸಿದರು ಅದು ಸಾಲದು, ಆದರೂ ಅವರ ಪಾದ ಕಮಲಗಳಿಗೆ ಸೇವೆಯ ಮೂಲಕ ಒಂದು ಸಣ್ಣ ಗೌರವ ಸಮರ್ಪಣೆ ಸಲ್ಲಿಸುವ ಸಲುವಾಗಿ ಅವರು ಪರಿನಿಬ್ಬಾಣ ಹೊಂದಿದ ದಿನವಾದ ಡಿಸೆಂಬರ್ 6 ರಂದು ಹೊನ್ನೂರು ಗ್ರಾಮದ ಅಂಬೇಡ್ಕರ್ ಭೀಮ್ಆ ರಾವ್ ಶಾಲೆಯ ಆವರಣದಲ್ಲಿ ರಕ್ತದಾನ, ಕಣ್ಣಿನ ತಪಾಸನ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು ಸ್ವ ಹಿಚ್ಚಯಿಂದ ಬಾಬಾ ಸಾಹೇಬರ ಸ್ಮರಣಾರ್ಥದಲ್ಲಿ ರಕ್ತದಾನ ಮಾಡಲು ಇಚ್ಛಿಸುವವರು ಇದರ ಒಂದು ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ, ಇದರೊಂದಿಗೆ ಕಣ್ಣಿನ ತಪಾಸನ ಶಿಬಿರವನ್ನು ಸಹ ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲಾ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಲ್ಯಾಬ್ ಟೆಕ್ನೀಷಿಯನ್ ಮೋಹನ್ ಬಾಬು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಅಂಗವಾಗಿ ಹೊನ್ನೂರು ಗ್ರಾಮದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು,ಈ ಪುಣ್ಯ ದಿನ ನಡೆಯುವ ಕಾರ್ಯಕ್ರಮಕ್ಕೆ ತಾಲೂಕಿನ ಮಹಾಜನತೆ ಇದರ ಸದುಪಯೋಗ ಪಡೆದು ಬುದ್ಧವಂದನೆಯನ್ನು ಸ್ವೀಕರಿಸಬೇಕೆಂದು ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಬ್ಲಾಕ್ ಅಂಡ್ ವೈಟ್ ಫೌಂಡೇಶನ್ ಅಧ್ಯಕ್ಷರಾದ ಕೆಸ್ತೂರು ಶಾಂತರಾಜು, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷರಾದ ಹೊನ್ನೂರು ಸುರೇಶ್, ಮಹಾ ಚೇತನ ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಮಂಟೇಲಿಂಗಯ್ಯ ರವರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ