ಸಿರುಗುಪ್ಪ : -ನಗರದ ಟಿಪ್ಪು ಸುಲ್ತಾನ್ ವೃತ್ತದ ಬಳಿ ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ಹಾಗೂ ಸ್ಪಂದನಾ ರಕ್ತನಿಧಿ ಕೇಂದ್ರಗಳ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.
ಸ್ಪಂದನಾ ರಕ್ತನಿಧಿ ಕೇಂದ್ರದ ವೈದ್ಯ ಡಾ.ಪ್ರಕಾಶ ಅವರು ಮಾತನಾಡಿ ಎಲ್ಲಾ ದಾನಗಳಲ್ಲಿ ಮಹತ್ತರವಾದದ್ದು ರಕ್ತದಾನವಾಗಿದೆ.ಅಪಘಾತ, ದೀರ್ಘಕಾಲಿಕವಾಗಿ ರಕ್ತದ ಅಗತ್ಯವಿರುವ ರೋಗಿಗಳಿಗೆ, ಗರ್ಭಿಣಿಯರಿಗೆ, ರಕ್ತದ ಕೊರತೆ ಕಂಡುಬರುತ್ತದೆ. ಅಂತಹ ಸಮಯದಲ್ಲಿ ನಾವು ದಾನವಾಗಿ ನೀಡುವ ರಕ್ತವು ದಾನ ಪಡೆಯುವವರಿಗೆ ಸುಧೆಯಾಗುತ್ತದೆ.
ನಿಯಮಿತವಾಗಿ ಆಗಾಗ ರಕ್ತದಾನವನ್ನು ಮಾಡುತ್ತಾ ಬಂದರೆ ನಮ್ಮಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಹೊಸ ಚೈತನ್ಯವೂ ಉಂಟಾಗುತ್ತದೆ.ಕೊಬ್ಬಿನಾಂಶ ಕಡಿಮೆಯಾಗಿ ಶೇ.80ರಷ್ಟು ಹೃದಯಾಘಾತ ಕಡಿಮೆಯಾಗುತ್ತದೆ. ಆದ್ದರಿಂದ ಆರೋಗ್ಯವಂತ ಎಲ್ಲರೂ ರಕ್ತದಾನ ಮಾಡಬಹುದಾಗಿದೆ. ಇಲ್ಲಿವರೆಗೂ 50 ಜನ ರಕ್ತದಾನವನ್ನು ಮಾಡಿದ್ದಾರೆಂದು ತಿಳಿಸಿದರು.
ಇದೇ ವೇಳೆ ನಗರಸಭೆ ಸದಸ್ಯ ಮೀರಾಹುಸೇನ್ ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟಿನ ಅಧ್ಯಕ್ಷ ಮಹಮದ್ ಸಮೀರ್ ಗೋರಿ, ಕಾರ್ಯದರ್ಶಿ ಹದಮತ್ತುಲ್ಲಾ, ಸದಸ್ಯರಾದ ಸಲೀಂಬಾಷಾ, ಸ್ಥಳೀಯ ಮುಖಂಡರಾದ ಟಿ.ಮಹಮದ್ ಶಫಿ, ಚೌದ್ರಿ ಖಾಜಾಸಾಬ್, ಚಿಟಿಗಿ ಹುಸೇನ್‌ಸಾಬ್, ಇನಾಯತ್, ಖಾಜಾ ದೇಶನೂರು, ಹತಾವುಲ್ಲಾ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಇನ್ನಿತರರಿದ್ದರು.
ವರದಿ:-ಶ್ರೀನಿವಾಸ ನಾಯ್ಕ