ಘಟಪ್ರಭಾ: ಘಟಪ್ರಭಾ ಗುಬ್ಬಲಗುಡ್ಡ ಶ್ರೀ ಕೆಂಪಯ್ಯ ಸ್ವಾಮಿ ಗಳ ಮಠದ ಡಾಕ್ಟರ್, ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಹುಟ್ಟು ಹಬ್ಬದ ನಿಮಿತ್ತವಾಗಿ ರಕ್ತ ದಾನ ಶಿಬಿರ, ಮತ್ತು ವಿವಿಧ ರೋಗಗಳ ತಪಾಸಣೆ ಸಲಹೆ, ಚಿಕಿತ್ಸೆ ಮುಂತಾದ ಕಾರ್ಯಕ್ರಮ ಗಳನ್ನು ದಿನಾಂಕ 05-8-2025 ರಂದು ಹಮ್ಮಿಕೊಳ್ಳಲಾಗಿದೆ.

ಅವುಗಳ ತಯಾರಿ ಮತ್ತು ಯಶಸ್ವಿಯಾಗಲು ಘಟಪ್ರಭಾ ಹಾಗೂ ಸುತ್ತ ಮುತ್ತಲಿನ ಭಕ್ತರ ಪೂರ್ವ ಭಾವಿ ಸಭೆ ಸೋಮವಾರ 14-5-20250 ರಂದು ಮಠದಲ್ಲಿ ನಡೆಯಿತು ಮತ್ತು ನನ್ನ ಜನ್ಮದಿನದ ನಿಮಿತ್ಯ ಸಮಾಜಕ್ಕೆ ನಮ್ಮಿಂದ ಏನಾದ್ರು ಒಳ್ಳೆ ಕೆಲಸ ಮಾಡುವುದರ ಮೂಲಕ ಸಮಾಜಮುಖಿ ಸೇವೆಯಲ್ಲಿ ಈ ದಿನವನ್ನು ಕಳೆಯುವುದು ಉತ್ತರ ಎಂದು ಮಲ್ಲಿಕಾರ್ಜುನ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಗಣೇಶ, ಗಾಣಿಗ, ರಾಮಣ್ಣ ಹುಕ್ಕೇರಿ, ಶ್ರೀಕಾಂತ ಮಹಾಜನ, ಕಲ್ಲಪ್ಪ ಕಾಡದವರ, ಶಿವು ಕುಡ್ಡೆಮ್ಮಿ,, ಧರೆಪ್ಪ ಮಗದುಮ್ಮ ಸೇರಿದಂತೆ ಹಲವಾರು ಭಕ್ತರು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು, ಸಾನಿಧ್ಯ ವಹಿಸಿದ್ದ ಡಾಕ್ಟರ್ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುಂಬರುವ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ಮಾಡಿ ಆಶೀರ್ವಚನ ನೀಡಿದರು, , ಕರಿಗಾರ ಗುರುಗಳು ಕಾರ್ಯಕ್ರಮ ನಿರೂಪಣೆ ಮಾಡಿದರು.
ಡಾ, ಕೋಣೀನ್,ಗಂಗಾಧರ ಬಡಕುಂದ್ರಿ, ರಮೇಶ್ ತುಕ್ಕಾನಟ್ಟಿ, ಕಾಡಪ್ಪಾ ಕರೋಶಿ, ಪ್ರದೀಪ್ ಕುಲಕರ್ಣಿ, ರವೀಂದ್ರ ಉಪ್ಪಾರ ಗೋಪಾಲ ಬೆನಕಟ್ಟಿ ಪ್ರಕಾಶ ಗಾಯಕವಾಡ, ಸೇರಿದಂತೆ ಮಲ್ಲಾಪುರ, ಬಡಿಗವಾಡ ಪಾಮಲದಿನ್ನಿ ರಾಜಾಪುರ ಬೆಲ್ಲದ ಬಾಗೇವಾಡಿ, ದುಪದಾಳ ಜಾಂಗಟಿಹಾಳ ಗುಡಸ ಶಿರಢಾಣ, ಸಾವಳಗಿ, ನಂದಗಾಂವ, ಮುತ್ನಾಳ, ಖಾನಾಪುರ ಸೇರಿದಂತೆ ಘಟಪ್ರಭಾ ಹಾಗೂ ಸುತ್ತ ಮುತ್ತಲಿನ ಭಕ್ತರು ಮತ್ತು ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಮತ್ತು ಗೋಕಾಕ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಮತ್ತು ಗೋಕಾಕ.
ವರದಿ: ಶಿವಾಜಿ ಎನ್ ಬಾಲೆಶಗೋಳ




