ಚಿಕ್ಕೋಡಿ :ಮಹಾದೇವ ಮಂದಿರ ಸೇವಾ ಸಮಿತಿ ಹಾಗೂ ಅಕ್ಕಮಹಾದೇವಿ ಬಳಗ ಸದಲಗಾ ಇವರ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ಯ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆಯ ಶಿಬಿರವನ್ನು ಪಟ್ಟಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಅತಿ ಹೆಚ್ಚಾಗಿ ರಕ್ತಧಾನ ಮಾಡುವ ಮುಖಾಂತರ ಸಹಕರಿಸಿದರು ಜನರು ರಕ್ತದಾನ ಶಿಬಿರದಲ್ಲಿ ಸುಮಾರು 206 ಜನ ರಕ್ತ ದಾನ ಮಾಡಿದರು ಇದರಲ್ಲಿ ಸ್ತ್ರೀಯರು 28 ಜನ ಹಾಗೂ ಪುರುಷರು 178 ಜನರು
ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು ವಿಶೇಷವಾಗಿ ದಾನಿಗಳಿಗೆ ಅಲ್ಪೋಹಾರದ ವ್ಯವಸ್ಥೆ ಹಾಗೂ ರಕ್ತದಾನ ನೀಡಿದಂತ ವ್ಯಕ್ತಿಗಳಿಗೆ ಸ್ಕೂಲ್ ಬ್ಯಾಗ್ ಮತ್ತು ಮೊಬೈಲ್ ಹೆಡ್ ಫೋನ್ ದಾನಿಗಳಿಗೆ ಈ ಕಾರ್ಯಕ್ರಮ ಮುಖಾಂತರ ನಿಯೋಜಿಸಿದ ಕಮಿಟಿ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಮಹಾದೇವ ದೇವಸ್ಥಾನದ ಆಗಮಿಸಿದ ಪೂಜ್ಯರು ಹಾಗೂ ಭಕ್ತಾದಿಗಳು ಪಟ್ಟಣದ ನಾಗರಿಕರ ಉಪಸ್ಥಿತರಿದ್ದರು
ವರದಿ :ರಾಜು ಮುಂಡೆ




