Ad imageAd image

ರಕ್ತದಾನಕ್ಕೆ ಪುನರ್ಜನ್ಮ ನೀಡುವ ಶಕ್ತಿಯಿದೆ : ಬಸವ ಭೂಷಣ ಶ್ರೀ.

Bharath Vaibhav
ರಕ್ತದಾನಕ್ಕೆ ಪುನರ್ಜನ್ಮ ನೀಡುವ ಶಕ್ತಿಯಿದೆ : ಬಸವ ಭೂಷಣ ಶ್ರೀ.
WhatsApp Group Join Now
Telegram Group Join Now

ಸಿರುಗುಪ್ಪ : ಅಪಘಾತ, ರಕ್ತಹೀನತೆಯಿಂದ ಬಳಲುವವರಿಗೆ ರಕ್ತದಾನವು ಪುನರ್ಜನ್ಮ ನೀಡುವ ಶಕ್ತಿಯನ್ನು ಹೊಂದಿದೆ ಎಂದು ಗುರು ಬಸವ ಮಠದ ಶ್ರೀ ಬಸವಭೂಷಣ ಶ್ರೀ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಜಿಲ್ಲಾ ಸೌಹಾರ್ಧ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದ ಅವರು ಸೌಹಾರ್ದ ಸಂಘಗಳು ಇಂದು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಸಹಕಾರಿಯಾಗಿವೆ.

ಜೊತೆಗೆ ಜೀವಗಳನ್ನು ಉಳಿಸುವಂತಹ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಜೀವದಾನದಂತಹ ಆರೋಗ್ಯ ಹಾಗೂ ಸಮಾಜಮುಖಿ ಕಾರ್ಯಗಳು ಆದರ್ಶನೀಯವಾಗಿ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ರಜತ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಸಿರಿ ಮಹಾಲಕ್ಷ್ಮಿ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಹೆಚ್.ಜೆ.ಸುಧಾ ಅವರು ಉದ್ಘಾಟಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ, ಶ್ರೀ ವಿಷ್ಣು ವಿಲಾಸ ಸೌಹಾರ್ದ ಸಹಕಾರಿಯ ಅಧ್ಯಕ್ಷ ಹೆಚ್.ಜೆ.ಹನುಮಂತಯ್ಯ ಅವರು ಮಾತನಾಡಿ ಎಲ್ಲಾ ಸಹಕಾರಿ ಪದಾಧಿಕಾರಿಗಳು, ದುರೀಣರ ಸಹಕಾರ ರಜತ ಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ಪುಷ್ಠಿಯನ್ನು ನೀಡಿದೆಂದು ತಿಳಿಸಿದರು.

ಇದೇ ವೇಳೆ ಶಿವಶರಣೆ ನೀಲಾಂಬಿಕೆ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪಂಪಾಪತಿಗೌಡ ಸೇರಿದಂತೆ, ಗಾದಿಲಿಂಗನೌಡ, ವಿರುಪಾಕ್ಷಿಗೌಡ, ಜಿ.ಬಿ.ಚೌದ್ರಿ, ಸೇರಿದಂತೆ ಇನ್ನಿತರ ಸಹಕಾರಿಗಳ ಪದಾಧಿಕಾರಿಗಳಾದ ಈರಣ್ಣ, ಯಾಡ್ಕಿ ಮಂಜುನಾಥ, ಕೃಷ್ಣಾರೆಡ್ಡಿ, ಬಿ.ಜೆ.ರಾಘವೇಂದ್ರಶೆಟ್ಟಿ ಸೇರಿದಂತೆ ನಿರ್ದೇಶಕರು, ಸಾರ್ವಜನಿಕರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!