Ad imageAd image

ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ರಕ್ತ ಶೇಖರಣಾ ಘಟಕ : ರಾಜ್ಯ ಸರ್ಕಾರ ನಿರ್ಧಾರ

Bharath Vaibhav
ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ರಕ್ತ ಶೇಖರಣಾ ಘಟಕ : ರಾಜ್ಯ ಸರ್ಕಾರ ನಿರ್ಧಾರ
WhatsApp Group Join Now
Telegram Group Join Now

ಬೆಂಗಳೂರು : ರಕ್ತ ಸಿಗದೆ ಮೃತಪಡುವ ಪ್ರಕರಣಗಳಿಗೆ ಇನ್ಮುಂದೆ ಬ್ರೇಕ್ ಬೀಳಲಿದ್ದು, ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ರಕ್ತ ಶೇಖರಣಾ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ಫಸ್ಟ್ ರೆಫರಲ್ ಯೂನಿಟ್ (ರಕ್ತ ಶೇಖರಣಾ ಘಟಕ) ಗಳನ್ನು ಸ್ಥಾಪಿಸುವ ಮೂಲಕ ರಕ್ತ ಸಿಗದೆ ಮೃತಪಡುವ ಪ್ರಕರಣಗಳಿಗೆ ಕಡಿವಾಣ ಹಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲಿನ 50 ತಾಲೂಕು ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ ಫಸ್ಟ್ ರೆಫರಲ್ ಯುನಿಟ್ ಸ್ಥಾಪಿಸಲಾಗುತ್ತದೆ.

ಬೆಳಗಾವಿ 8, ಬೆಂಗಳೂರು ನಗರ, ಕೊಪ್ಪಳ 5, ದ.ಕ 3, ಉತ್ತರ ಕನ್ನಡ, ಬೆಂಗಳೂರು ಗ್ರಾಮೀಣ, ಹಾವೇರಿ, ಹಾಸನ, ಕಲಬುರಗಿ, ಬಳ್ಳಾರಿ ವಿಜಯಪುರ, ಉಡುಪು, ರಾಮನಗರ, ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ತಲಾ 2, ದಾವಣಗೆರೆ, ಬೀದರ್, ಚಿಕ್ಕಮಗಳೂರು, ಬಾಗಲಕೋಟೆ, ಯಾದಗಿರಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ ಒಂದು ಹೊಸ ರಕ್ತ ಸಂಗ್ರಹ ಘಟಕವು ಸೆಪ್ಟೆಂಬರ್ನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!