ಬೆಂಗಳೂರು : ಭಾರತೀಯ ಹಿಂದೂ ಸನಾತನ ಧರ್ಮದ ಸಂಪ್ರದಾಯ ಗೌರಿ ಗಣೇಶ ಹಬ್ಬದಂದು ಸಹೋದರಿಯರಿಗೆ ಬಾಗಿನ ನೀಡುವ ಹಿಂದಿನ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಸಂಪ್ರದಾಯ ಆ ಸಂಪ್ರದಾಯದಂತೆ ನಮ್ಮ ಚಿಕ್ಕಬಾಣ ವಾರದ ಪುರಸಭೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ವೃಂದದವರಿಗೆ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ. ಎಂ.ಚಿಕ್ಕಣ್ಣ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ನೀಡಿದರು.

ನಂತರ ಮಾತನಾಡಿದ ಅವರು ಸಮೃದ್ಧಿ, ಆರೋಗ್ಯ ಮತ್ತು ನೆಮ್ಮದಿಯನ್ನು ಹಾರೈಸಲು ನೀಡುವ ಒಂದು ಉಡುಗೊರೆಯಾಗಿದೆ. ಇದು ಸಾಮಾನ್ಯವಾಗಿ ‘ಗೌರಿ- ಗಣೇಶ’ ಹಬ್ಬ ಅಥವಾ ವರಮಹಾಲಕ್ಷ್ಮಿ ಹಬ್ಬದಂದು ಸಹೋದರಿಯರಿಗೆ ಬಾಗಿನ ಅರ್ಪಿಸುವ ಪದ್ಧತಿ ಪರಂಪರೆಯಾಗಿದೆ ಆ ಹಿನ್ನೆಲೆಯಲ್ಲಿ ವಿನೂತನವಾಗಿ ನಮ್ಮ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ವತಿಯಿಂದ ರಾಜ್ಯಾದ್ಯಂತ ಗ್ರಾಂ ಪಂಚಾಯತಿ,ನಗರ ಸಭೆ, ಬಿಬಿಎಂಪಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿ ಮತ್ತು ಮಹಿಳಾ ಪೌರಕಾರ್ಮಿಕರಿಗೆ ಇದರಲ್ಲಿ ತಾರತಮ್ಯ ಇಲ್ಲಾ ಈ ಸಂದೇಶ ರಾಜ್ಯ ದೇಶ ತಲುಪಬೇಕು ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಿಕ್ಕಬಾಣವಾರದ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿವೃಂದದವರಿಗೆ ಬಾಗಿನ ವಿತರಿಸಿ ರಾಜ್ಯಾಧ್ಯಕ್ಷ ಬಿ ಎಂ ಚಿಕ್ಕಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್,ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಪದಾಧಿಕಾರಿಗಳಾದ ಮಹ್ಮದ್ ಸಲೀಂ, ಚಾಂದ್ ಪಾಷಾ, ಮಹ್ಮದ್ ಅಸ್ಗರ್, ಶಕೀಲ್ ಅಹ್ಮದ್, ಸಲೀಂ ಅಹ್ಮದ್, ಸ್ವಾಮಿ, ಶಾಂತಕುಮಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




