ಸೇಡಂ:ತಾಲೂಕಿನ ಮದನಾ ಗ್ರಾಮದ ಲಾಲಪ್ಪ ಕಲಾಲ್ ಅವರ ಚಹಾ ಅಂಗಡಿಯಲ್ಲಿ ಸುಮಾರು ೯೦ ಲೀಟರ್ ಸೇಂದಿ ಹಾಗೂ ನರಸಪ್ಪ ಎಂಬುವರರ ಮನೆಯ ಆವರಣದಲ್ಲಿ ಸುಮಾರು ೩೫೦ ಲೀಟರ್ ಸೇಂದಿ ಸಂಗ್ರಹಿಸಿ ಮಾರಾಟಕ್ಕೆ ಇಡಲಾಗಿದ್ದನ್ನು ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಸಾಮೂಹಿಕ ದಾಳಿ ಮಾಡಿ ಜಪ್ತಿ ಮಾಡಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆಯ ನಿರೀಕ್ಷಕರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸೇಂದಿ ಜಪ್ತಿ ಸಮಯದಲ್ಲಿ ಅಬಕಾರಿ ಇಲಾಖೆಯ ನಿರೀಕ್ಷರಾದ ಓಂಪ್ರಕಾಶ್ ಮಠಪತಿ, ಶ್ರೀಮತಿ ವಿಜಯಲಕ್ಷ್ಮಿ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




