ಸೇಡಂ: ತಮ್ಮ ರಾಜಕೀಯ ಗೋಸ್ಕರ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಬಳಸಬೇಡಿ ಏಕೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದೇ ಜಾತಿ ಒಂದೇ ಪಕ್ಷಕ್ಕೆ ಸೀಮಿತ ರಲ್ಲ,ಅವರು ಇಡೀ ಭಾರತ ದೇಶಕ್ಕೆ ದೇವರು ಸಮಾನರು,ನೀವುಗಳು ನಿಮ್ಮ ರಾಜಕೀಯ ಬೆಳೆಬೈಸಿಕೊಳ್ಳಲು ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ತರಬೇಡಿ, ಗೃಹ ಮಂತ್ರಿ ಅಮಿತ್ ಶಾ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದಾಗ ಎಲ್ಲಿ ಹೋಯ್ತು ನಿಮ್ಮ ಗಟ್ಟಿ ಧ್ವನಿ, ಇವಾಗ ಡಾ. ಅಂಬೇಡ್ಕರ್ ಕಾಂಗ್ರೆಸ್ ಪಕ್ಷದ ಆಸ್ತಿನ ಎಂದು ಪ್ರಶ್ನೆ ಮಾಡುತ್ತೀರಾ? ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಷಬಂದಾಗ ನೀವು ಯಾವುದೇ ಪೇಪರ್ ಸ್ಟೇಟ್ಮೆಂಟ್ ಕೂಡ ಕೊಡಲಿಲ್ಲ, ಇವಾಗ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತನಾಡುತ್ತೀರಾ? ನೀವುಗಳು ವೈಯಕ್ತಿಕವಾಗಿ ರಾಜಕೀಯವಾಗಿ ಏನಾದ್ರೂ ಟೀಕೆ ಮಾಡಿಕೊಳ್ಳಿ, ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೆಸರು ಬಳಸಬೇಡಿ ಎಂದು ದಲಿತ ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭಗವಾನ್ ಭೋಚಿನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.
ವರದಿ ವೆಂಕಟಪ್ಪ ಕೆ ಸುಗ್ಗಾಲ್