ಕಾಳಗಿ :ಬುದ್ಧವಾರ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬುದ್ಧಗಯಾ ಮಹಾವಿಹಾರದ ಕುರಿತು ಪೂರ್ವ ಭಾವಿಸಭೆ ಸೇರಲಾಯಿತು, ಈ ಸಂದರ್ಭದಲ್ಲಿ,ಶಂಕರ ಹೇರೂರು ಪಂಚಾಶೀಲ ಪಾಲಿಸುವ ಮೂಲಕ ಬೌದ್ಧ ಧಮ್ಮ ವನ್ನು ಸ್ವೀಕರಿಸಿ ಸತ್ಯದ ಮಾರ್ಗ ಹಿಡಿಯೋಣ ಎಂದರು, ಹಾಗೂ ಮರೆಪ್ಪ ಹಳ್ಳಿ ಬೌದ್ಧ ಉಪಾಸಕ ಮಾತನಾಡಿ, ಬಿ ಟಿ ಆಕ್ಟ್ 1949 ರದ್ದು ಗೊಳಿಸಿ ಬುದ್ಧಗಯಾದ ಮಹಾವಿಹಾರ ಬ್ರಾಹ್ಮಣರ ಸ್ವಾಧಿನದಲ್ಲಿದ ಆಡಳಿತವು ಸಂಪೂರ್ಣವಾಗಿ ಬೌದ್ಧರಿಗೆ ನೀಡಲು ಒತ್ತಾಯಿಸಿ ಮಹಾಭೋಧಿ ಮಹಾ ವಿಹಾರ ಮುಕ್ತಿ ಆಂದೋಲನ ಬೆಂಬಲಿಸಿ ಜಿಲ್ಲಾ ಮಟ್ಟದ ಬ್ರಹತ್ ಪ್ರತಿಭಟನೆಯನ್ನು 01 ಏಪ್ರಿಲ್ 2025 ರಂದು ಮಧ್ಯಾಹ್ನ 12:30 ರಿಂದ ಮೆರವಣಿಗೆ ಮೂಲಕ ಡಾ ಬಾಬಾ ಸಾಹೇಬ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ವರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬೌದ್ಧ ಉಪಸಕರು, ಸೂರ್ಯಕಾಂತ ನಿಂಬಳ್ಕರ್,ಹಣಮಂತ ಭೋದನಕರ, ಮಹೇಂದ್ರ ಪೂಜಾರಿ, ಮತ್ತು ಕಾಳಗಿ ತಾಲೂಕಿನ ಹಿರಿಯ ಮುಖಂಡರು , ಸಂಘಟನಾಕರಾರು, ಯುವಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ವರದಿ : ಹಣಮಂತ ಕುಡಹಳ್ಳಿ