Ad imageAd image

ಮುಂಬೈ ಸಮೀಪದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಭಾರೀ ಅಗ್ನಿ ಅವಘಡ

Bharath Vaibhav
WhatsApp Group Join Now
Telegram Group Join Now

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿಯ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು, ಅಗ್ನಿ ಅವಘಡ ಸಂಭವಿಸಿದೆ. ಡೊಂಬಿವಿಲಿಯ MIDC (ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ) ಸಂಕೀರ್ಣದ 2 ನೇ ಹಂತದ ರಾಸಾಯನಿಕ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಅಂಬರ್ ಕೆಮಿಕಲ್ ಕಂಪನಿಯ ನಾಲ್ಕು ಬಾಯ್ಲರ್​ಗಳು ಸ್ಫೋಟಗೊಂಡಿದ್ದು, ಭಾರೀ ಪ್ರಮಾಣದ ಬೆಂಕಿ-ಹೊಗೆ ಪ್ರದೇಶವನ್ನು ಆವರಿಸಿದೆ.ಬೆಂಕಿಯ ರಭಸಕ್ಕೆ ಕೆಮಿಕಲ್ ಇರುವ ಡ್ರಮ್ ಗಳು ಸಿಡಿಯಲಾರಂಭಿಸಿದ್ದು, ಪಕ್ಕದ ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ.

WhatsApp Group Join Now
Telegram Group Join Now
Share This Article
error: Content is protected !!