ಮಾನ್ವಿ :-5ಕೋಟಿ ಕೊಡಬೇಕೆಂದು ಬೆದರಿಕೆ ಸಂದೇಶ ಹಾಕಿದ್ದ ಸೋಹೆಲ್,ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಸೋಹೆಲ್ ಪಾಷ ಬಂಧನ,ಮುಂಬೈ ನಗರದ ವರ್ಲಿ ಠಾಣೆಯಲ್ಲಿ ಪ್ರಕರಣ ದಾಖಲು,ಮಾನ್ವಿ ನಗರದ ಟೈಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೋಹೆಲ್ ಪಾಷ,ಮಗನ ಬಂಧನದಿಂದ ಪೋಷಕರ ಕಣ್ಣೀರು
ಸಾಮಾಜಿಕ ಜಾಲತಾಣವೆಂದರೆ ಕೈಯಲ್ಲಿರುವ ಮುಳ್ಳು ಇದ್ದಂಗೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಯಾಗಿದ್ದ ಮಾನ್ವಿ ನಗರದ ನಿವಾಸಿ ಸೋಹೆಲ್ ಪಾಷ ಎಂಬ ಯುವಕ ಸಲ್ಮಾನ್ ಖಾನ್ ರನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದರಿಂದ ಮುಂಬಯಿ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಬಹುಬೇಗ ಹೆಸರು ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಹಾಕಿದ್ದ ಆರೋಪಿ ಸೋಹೆಲ್ 5ಕೋಟಿ ಕೊಡಬೇಕು ಸಂದೇಶ ಹಾಕಿದ್ದ. ಮಗನ ಬಂಧನದಿಂದ ಪೋಷಕರು ಕಣ್ಣೀರಿಡುತ್ತ ನಮ್ಮ ಮಗ ಅಮಾಯಕ ಎಂದು ತಿಳಿಸಿದ್ದಾರೆ.
ಎಂಟನೇ ತರಗತಿ ಓದಿದ್ದ ಸೋಹೆಲ್ ಪಾಷಾ ಹಿಂದಿ ಹಾಡುಗಳನ್ನ ಬರೆಯುತ್ತಿದ್ದ, ಸಲ್ಮಾನ್ ಖಾನ್ ಕುರಿತಾಗಿಯೂ ಹಾಡು ಬರೆದಿದ್ದ ಅಭಿಮಾನಿಯಿಂದಲೇ ಕೊಲೆ ಬೆದರಿಕೆ ಹಾಕಿದ್ದರಿಂದ ಮುಂಬೈ ನಗರದ ವರ್ಲಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಿಸುತ್ತಿದ್ದಾರೆ.
ಮಾನ್ವಿ ನಗರವು ಭಾರತ ದೇಶಾದ್ಯಂದ ಸೋಹೆಲ್ ಎಂಬ ಯುವಕನ ಎಡವಟ್ಟಿನಿಂದ ಪ್ರಚಲಿತದಲ್ಲಿದೆ ಎಂದು ಬುದ್ದೀ ಜೀವಿಗಳ ನೋವಿನ ನುಡಿಯಾಗಿದೆ.
ವರದಿ :-ಶಿವ ತೇಜ