ಡೆಹ್ರಾಡೂನ್, : ಹತ್ತಾರು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಭೂಪೇಂದ್ರ ತನೇಜಾ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಡೆಹ್ರಾಡೂನ್‌ನ ಧರಂಪುರದಲ್ಲಿ ತಮ್ಮದೇ ಆದ ‘ಮೊಮೊ ಫಾಸ್ಟ್ ಫುಡ್’ ಸ್ಟಾಲ್ ನಡೆಸುತ್ತಿದ್ದಾರೆ. ಭೂಪೇಂದ್ರ ತನೇಜಾ ಶೂಟಿಂಗ್ ಇಲ್ಲದಿದ್ದಾಗ ಜನರಿಗೆ ರುಚಿಕರವಾದ ಫಾಸ್ಟ್ ಫುಡ್ ತಯಾರಿಸಿ ಉಣ ಬಡಿಸುತ್ತಿದ್ದಾರೆ. ಅವರ ಪತ್ನಿ ಸುಷ್ಮಾ ತನೇಜಾ ಕೂಡ ಈ ಕೆಲಸದಲ್ಲಿ ಅವರಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಹವ್ಯಾಸಕ್ಕಾಗಿ: ಭೂಪೇಂದ್ರ ತನೇಜಾ, ಡೆಹ್ರಾಡೂನ್‌ನ ಧರ್ಮಪುರದ ಮಾತಾ ಮಂದಿರ ರಸ್ತೆಯಲ್ಲಿ ತಮ್ಮ ಫಾಸ್ಟ್ ಫುಡ್ ಸ್ಟಾಲ್ ಹೊಂದಿದ್ದಾರೆ. ನನಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ ತನೇಜಾ. ಆದರೆ, ಇವರಿಗೆ ಏನನ್ನಾದರೂ ಹೊಸತನ್ನು ಮಾಡಬೇಕೆಂಬ ಬಯಕೆ ಇದೆ. ಹೀಗಾಗಿಯೇ ಇವರು ‘ಮೊಮೊ ಫಾಸ್ಟ್ ಫುಡ್’ ಆರಂಭಿಸಿದ್ದಾರೆ. ಭೂಪೇಂದ್ರ ತನೇಜಾ ಅವರು ಅಡುಗೆ ಮಾಡುವುದು ಎಂದರು, ಇಷ್ಟವಂತೆ ಈ ಕಾರಣಕ್ಕಾಗಿಯೇ ಅವರು ಈ ಫಾಸ್ಟ್ ಫುಡ್ ಸೆಂಟರ್ ಆರಂಭಿಸಿದ್ದಾರೆ.
29 ವರ್ಷಗಳಿಂದ ಬಾಲಿವುಡ್ನಲ್ಲಿ ಕೆಲಸ: ಕಳೆದ 29 ವರ್ಷಗಳಿಂದ ಬಾಲಿವುಡ್ನಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಭೂಪೇಂದ್ರ ತನೇಜಾ. ರಂಗಭೂಮಿಯಿಂದ ಪ್ರಾರಂಭವಾದ ಇವರ ಸಿನಿ ಪಯಣ, ಧಾರಾವಾಹಿಗಳು, ಚಲನಚಿತ್ರಗಳಲ್ಲಿ ಮುಂದುವರೆಯಿತು. ನಂತರ ಕೆಲವು ಹಾಲಿವುಡ್ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಎರಡು ದಕ್ಷಿಣ ಚಲನಚಿತ್ರಗಳಲ್ಲದೇ ಗುಜರಾತಿ, ಪಂಜಾಬಿ ಮತ್ತು ಬೆಂಗಾಲಿ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವೆಲ್ಲವುಗಳ ನಡುವೆ ಅವರು ಅತಿ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೇವಲ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲದೇ ಅವರು ಅಡುಗೆ ಮಾಡುವ ಹವ್ಯಾಸ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಚಿತ್ರಗಳ ಜೊತೆಗೆ ಅಥವಾ ಮ್ಯಾಗಿ ಪಾಯಿಂಟ್‌ನಲ್ಲಿ ಹಲವು ಹೊಸ ಭಕ್ಷ್ಯಗಳನ್ನು ಪ್ರಯೋಗಿಸುತ್ತಿದ್ದಾರೆ. ಶೂಟಿಂಗ್‌ನಲ್ಲಿ ಇಲ್ಲದಿದ್ದಾಗ ಮ್ಯಾಗಿ ಪಾಯಿಂಟ್ ನಡೆಸುತ್ತೇನೆ ಅಂತಾರೆ ನಟ.
12th ಫೇಲ್ ಅವರ ದೊಡ್ಡ ಚಿತ್ರ. ಇದು ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಇದು ತಮಗೆ ಮನ್ನಣೆ ತಂದು ಕೊಟ್ಟಿತು. ಇದಕ್ಕಾಗಿ ಅವರು ತಮ್ಮನ್ನು ಅದೃಷ್ಟವಂತರು ಎಂದೇ ಪರಿಗಣಿಸುತ್ತಾರೆ.