Ad imageAd image

ಗರ್ಭದಾರಣೆ ಸಮಯ ಕಷ್ಟದಿಂದ ಕೂಡಿತ್ತು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

Bharath Vaibhav
ಗರ್ಭದಾರಣೆ ಸಮಯ ಕಷ್ಟದಿಂದ ಕೂಡಿತ್ತು: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
WhatsApp Group Join Now
Telegram Group Join Now

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಅವರು ತಮ್ಮ ಮಗಳಿಗೆ ದುವಾ ಎಂದು ಹೆಸರಿಟ್ಟಿದ್ದು, ತನ್ನ ಗರ್ಭಧಾರಣೆ ಎಷ್ಟು ಕಷ್ಟದಿಂದ ಕೂಡಿತ್ತು ಎಂಬುದನ್ನು ಬಾಲಿವುಡ್ ನಟಿ ದೀಪಿಕಾ ಇದೀಗ ಬಹಿರಂಗಪಡಿಸಿದ್ದಾರೆ.

ಮೇರಿ ಕ್ಲೇರ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ದೀಪಿಕಾ, ಗರ್ಭಾವಸ್ಥೆಯಲ್ಲಿ ಮತ್ತು ಹೊಸ ತಾಯಿಯಾಗಿ ತಮ್ಮ ಪ್ರಯಾಣದ ಕುರಿತು ಹಂಚಿಕೊಂಡಿದ್ದಾರೆ. ‘ನಾನು ಗರ್ಭಿಣಿಯಾಗಿ ಎಂಟು, ಒಂಬತ್ತು ತಿಂಗಳುಗಳಲ್ಲಿ ಮತ್ತು ಹೆರಿಗೆ ವೇಳೆಯಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದೆಎಂದು ಹೇಳಿದರು.

ತಮ್ಮ ಮಗಳಿಗೆ ಹೆಸರಿಟ್ಟ ಕುರಿತು ಮಾತನಾಡಿದ ದೀಪಿಕಾ, ‘ಆರಂಭಿಕ ದಿನಗಳಲ್ಲಿ ನಮಗೆ ಹೆಚ್ಚು ಮುಖ್ಯವಾಗಿದ್ದು ಅವಳೊಂದಿಗೆ ನಾವು ಇರುವುದಾಗಿತ್ತು. ಅವಳು ಜಗತ್ತನ್ನು ನೋಡುವುದು ಮತ್ತು ತನ್ನದೇ ಆದ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಅವಕಾಶ ನೀಡುವುದಾಗಿತ್ತು. ಅವಳನ್ನು ಹಿಡಿದುಕೊಳ್ಳುವ ಅನುಭವ, ಅವಳನ್ನು ಮೊದಲ ಬಾರಿಗೆ ನೋಡುವುದು ಮತ್ತು ಅವಳು ನಮ್ಮ ಜೀವನಕ್ಕೆ ತರುವ ಪ್ರೀತಿ ಮತ್ತು ಅರ್ಥದ ಪರಿಪೂರ್ಣ ಪ್ರಾತಿನಿಧ್ಯದಂತೆ ಭಾಸವಾಯಿತು ಎಂದರು.

ದೀಪಿಕಾ ಮತ್ತು ರಣವೀರ್ ಸೆಪ್ಟೆಂಬರ್ 8, 2024 ರಂದು ತಮ್ಮ ಮಗಳನ್ನು ಸ್ವಾಗತಿಸಿದರು. ದೀಪಾವಳಿಯಂದು, ಅವರು ತಮ್ಮ ಮಗಳ ಫೋಟೊವನ್ನು ಹಂಚಿಕೊಂಡರು ಮತ್ತು ಆಕೆಯ ಹೆಸರನ್ನು ಬಹಿರಂಗಪಡಿಸಿದರು.

ಮಗಳಿಗೆ ಇಟ್ಟಿರುವ ಹೆಸರಿನ ಹಿಂದಿನ ಆಲೋಚನೆಯನ್ನು ಹಂಚಿಕೊಂಡ ದಂಪತಿ, ‘ದುವಾ: ಅಂದರೆ ಪ್ರಾರ್ಥನೆ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆಎಂದು ಬರೆದಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!