Ad imageAd image

ಬೆಳಗಾವಿ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಸಂದೇಶ..?

Bharath Vaibhav
ಬೆಳಗಾವಿ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಸಂದೇಶ..?
WhatsApp Group Join Now
Telegram Group Join Now

ಬೆಳಗಾವಿ : ನಗರದಲ್ಲಿನ ಸುಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಲ್ಲಿ ಬಾಂಬ್ ಹಾಕಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. Marvelous belgaum ಎಂಬ ಹೆಸರಿನ ಇನ್​​ಸ್ಟಾಗ್ರಾಮ್ ​ಖಾತೆದಾರ ರಾಕೇಶ್ ನಂದಗಡಕರ ಅವರು ಆಗಸ್ಟ್ 12 ರಂದು ಕಪಿಲೇಶ್ವರ

ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸ್ಟೋರಿ ಹಾಕಿದ್ದರು. ಈ ಸ್ಟೋರಿ ನೋಡಿದ ಇನ್ಸ್ಟಾಗ್ರಾಮ್ ಖಾತೆದಾರ ರಿಪ್ಲೈ ಮಾಡಿದ್ದು, “ಮಾಷಾ ಅಲ್ಲಾ ಇದರ್ ಬಾಂಬ್ ಪೋಡುಂಗಾ ಏಕ್ ದಿನ್ ಅಂತಾ ಮೆಸೇಜ್ ಹಾಕಿದ್ದಾನೆ.

ಬೆದರಿಕೆ ಸಂದೇಶವನ್ನು ಗಮನಿಸಿ marvelous belgaum ಖಾತೆದಾರ ರಾಕೇಶ್ ನಂದಗಡಕರ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸದ್ಯ ಬೆಳಗಾವಿ ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!