ಬೆಳಗಾವಿ : ಶಾಲೆ, ಹೋಟೆಲ್ ಹಾಗೂ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾವಳಿ ಹೆಚ್ಚಾಗಿದೆ. ಅದರಲ್ಲೂ ನಿನ್ನೆ (ಅಕ್ಟೋಬರ್ 19) ಒಂದೇ ದಿನ ವಿವಿಧ ವಿಮಾನ ಸಂಸ್ಥೆಗೆ ಸೇರಿದ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಇದರಲ್ಲಿ ಚೆನ್ನೈ-ಬೆಳಗಾವಿ ವಿಮಾನವು ಸಹ ಸೇರಿದೆ.
ಚೆನ್ನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಮೇಲ್ ಬಂದಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು, ಇ-ಮೇಲ್ ಎಲ್ಲಿಂದ ಬಂದಿದೆ ಎನ್ನುವುದನ್ನು ತನಿಖೆ ನಡೆಸಿದ್ದಾರೆ.
ಚೆನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆಳಗಾವಿ ಏರ್ಪೋರ್ಟ್ ಅಥಾರಿಟಿಗೆ ಮೇಲ್ ಬಂದಿದೆ. ಹೀಗಾಗಿ ಬೆಳಗಾವಿಗೆ ಚೆನೈನಿಂದ ವಿಮಾನ ಸಂಪರ್ಕ ಕಡಿತಗೊಳಸಲಾಗಿದೆ.
ಇನ್ನು ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇ ಮೇಲ್ ಎಲ್ಲಿಂದ ಬಂದಿದೆ? ಯಾರು ಮಾಡಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.