ಗದಗ: ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಹೀಗಿದ್ದರೂ ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣಕ್ಕೆ ಮುಸ್ಲೀಮರ ಮೀಸಲಾತಿಗೆ ಬೆಂಬಲ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಅಂತಾ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಆಕ್ಷೇಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲೀಮರಲ್ಲೂ ಚಪ್ಪರಬಂದ್, ನದಾಫ್, ಪಿಂಜಾರ್ ಸೇರಿದಂತೆ 24 ಜಾತಿಯವರು ಬಹಳ ಹಿಂದುಳಿದವರಿದ್ದಾರೆ.
ಅವುಗಳಿಗೆ ಈಗಾಗಲೇ 2ಎ ಯಲ್ಲಿ ಮೀಸಲಾತಿ ಇದೆ. ಅವರಿಗೆ ಹೆಚ್ಚುವರಿಯಾಗಿ ಶೇ 4 ಪರ್ಸೆಂಟ್ ಮೀಸಲಾತಿ ಕೊಟ್ಟಿದ್ದರು. ಅದನ್ನೇ ಹಿಂದುಳಿದ ವರ್ಗಗಳ ಆಯೋಗ ಆಕ್ಷೇಪ ಮಾಡಿದೆ. ಈಗ ಆ ಕೇಸ್ ಸುಪ್ರೀಂ ಕೋರ್ಟಿನಲ್ಲಿದೆ ನೋಡೋಣ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ಮರು ಹಂಚಿಕೆ ಮಾಡುತ್ತಾರೆ ಎನ್ನುವ ಮಾತಿಗೆ ಪ್ರತಿಕ್ರಿಯಿಸಿದ ಅವರು, ಆಸ್ತಿ ಕೇಳುವುದಕ್ಕೆ ಬಹಳ ಚನ್ನಾಗಿ ಅನಿಸುತ್ತದೆ.
ಆದರೆ, ಯಾರದ್ದು ಕಿತ್ತುಕೊಂಡು ಯಾರಿಗೆ ಕೊಡುತ್ತಾರೆ ? ಏನ್ ಸರ್ವೆ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಕಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು. ಕಾಂಗ್ರೆಸ್ ನೀತಿ ಇದ್ದಲ್ಲಿ ಸ್ಪಷ್ಟವಾಗಿ ಹೇಳಬೇಕು.
ಸಂವಿಧಾನದಲ್ಲಿ ವಾಕ್ ಸ್ವಾತಂತ್ರದ ಹಾಗೆ ಆಸ್ತಿ ಮಾಡುವ ಹಕ್ಕೂ ಇದೆ. ಕಾಂಗ್ರೆಸ್ ನವರು ಸಂವಧಾನದ ವಿರುದ್ಧ ಕೆಲಸ ಮಾಡಿತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೀಗೆ ಮಾತ್ನಾಡಬಾರದು ಎಂದರು.