ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗ ಸೇರಿದಂತೆ ಈ ಭಾಗದಲ್ಲಿ ನಿರುದ್ಯೋಗ ಯುವಕ ಹಾಗೂ ಯುವತಿರಿಗೆ ಉದ್ಯೋಗ ಸೃಷ್ಟಿಸುವ ಹೊಸ ಹೊಸ ಕೋರ್ಸ್ ಪರಿಚಯಿಸುವ ನಿಟ್ಟಿನಲ್ಲಿ ಬೋಸ್ಟನ್ಇನ್ಸ್ಟಿಟ್ಯೂಟ್ ಆಫ್ ಅನಾಲಿಟಿಕ್ಸ್, ವಿದ್ಯಾನಗರದಲ್ಲಿ ತನ್ನ ಫ್ರಾಂಚೈಸ್ ಕ್ಯಾಂಪಸ್ ಅನ್ನು ತೆರೆಯುತ್ತಿದ್ದೇವೆ ಎಂದು
ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಕ್ಯಾರಕಟ್ಟಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಜನರೇಟಿವ್ ಎಐ (Al) ಮತ್ತು ಏಜೆಂಟ್ Al ಅಭಿವೃದ್ಧಿ ಸೈಬರ್ ಸೆಕ್ಯುರಿಟಿ ಮತ್ತು ಎಥಿಕಲ್ ಹ್ಯಾಕಿಂಗ್, ಕೌಡ್ ಕಂಪ್ಯೂಟಿಂಗ್ ಮತ್ತು ಡೆವೊಪ್ಸ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ವಿಶ್ವ ದರ್ಜೆಯ ತರಬೇತಿಯನ್ನ ಆನ್ ಲೈನ್ ಹಾಗೂ ಆಪ್ ಲೈನ್ ವ್ಯವಸ್ಥೆಯಲ್ಲಿ ನೀಡಲಾಗುವುದು.ಬಿಐಎಯ ಫ್ರಾಂಚೈಸ್ ಕ್ಯಾಂಪಸ್ ಆಗಿರುವ ಈ ಹೊಸ ಕೇಂದ್ರವು ಸಂಸ್ಥೆಯ ಅಂತರರಾಷ್ಟ್ರೀಯ ಶೈಕ್ಷಣಿಕ ಮಾನದಂಡಗಳ ಜೊತೆಗೆ ವಿದ್ಯಾರ್ಥಿಗಳ ವ್ಯತ್ತಿ ಬದುಕಿಗೆ ಅನುಕೂಲ ಆಗಲು ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಡಿಪ್ಲೊಮಾ ಮತ್ತು ಮಾಸ್ಟರ್ ಡಿಪ್ಲೊಮಾ ಕೋರ್ಸ್ಗಳು ಸೇರಿದಂತೆ ಬಿಐಎಯ ಡ್ಯುಯಲ್ ಪ್ರಮಾಣೀಕರಣ ಕಾರ್ಯ ಕ್ರಮಗಳು ಕಲಿಯುವವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಎದುರಿಸಲು ಇದು ಸಹಕಾರಿಯಾಗುತ್ತದೆ. ಬಿಐಎ ಪ್ರಮಾಣೀಕರಣ ಕೋರ್ಸ್ಗಳು 2 ತಿಂಗಳ ಖಾತರಿಯ ಇಂಟರ್ನ್ ಶಿಪ್ನೊಂದಿಗೆ ಡಿಪ್ಲೊಮಾ ಕಾರ್ಯಕ್ರಮಗಳು ಮತ್ತು 6 ತಿಂಗಳ ಕೆಲಸದ ತರಬೇತಿಯೊಂದಿಗೆ ಮಾಸ್ಟರ್ ಡಿಪ್ಲೊಮಾ ಕಾರ್ಯಕ್ರಮಗಳನ್ನು ನೀಡುತ್ತದೆ. ಈಗಾಗಲೇ ಸಾಕಷ್ಟು ಕಂಪನಿಗಳು ಐಟಿ ಬಿಟಿ ನಗರಕ್ಕೆ ಮಾತ್ರ ಸೀಮಿತ ಆಗಿದ್ದು ಈ ತಾರತಮ್ಯ ಹೋಗಲಾಡಿಸಲು ತಮ್ಮ ಕ್ಯಾಂಪಸ್ ಮುಂದಾಗಿದೆ ಎಂದರು.
ಬಿಐಎದಲ್ಲಿ ಕೋರ್ಸ್ ಪಡೆದ ಸಂಸ್ಥೆಯನ್ನು ಹುಬ್ಬಳಿಗೆ ತರುವುದು ಸ್ಥಳೀಯ ಯುವಕರನ್ನ ಇನ್ನಷ್ಟು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲ್ಯಗಳೊಂದಿಗೆ ಸಬಲೀ ಕರಣಗೊಳಿಸುವುದಾಗಿದೆ ಎಂದರು. ತಂದೆ ತಾಯಿ ಇಲ್ಲದ ಅನಾಥ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುವುದಾಗಿ ತಿಳಿಸಿದರು.

ಈ ಕ್ಯಾಂಪಸ್ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ವ್ರತ್ತಿಪರ ಬೆಳವಣಿಗೆಯ ಅವಕಾಶಗಳ ಕೇಂದ್ರವಾಗಿ ಕಾರ್ಯನಿರ್ವಣೆ ಮಾಡಲಿದೆ. ಜೂನ್ 15 ರಂದು
ಭಾನುವಾರ ಬೆಳಿಗ್ಗೆ 11 ಗಂಟೆಗೆ ಕ್ಯಾಂಪಸ್ ಉದ್ಘಾಟನೆ ಮಾಡಲಿದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ನಿವೃತ್ತ ಡಿಸಿಪಿ ಬಸವರಾಜ ಮಾಲಗತ್ತಿ, ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಆಗಮಿಸಲಿದ್ದು ಸಾನ್ನಿಧ್ಯವನ್ನ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಂದ್ರ ಮಹಾಸ್ವಾಮಿಗಳು ವಹಿಸುವರು ಎಂದರು.
ಈ ಸಂದರ್ಭದಲ್ಲಿ ಮ್ಯಾನೇಜರ್ ಅಶ್ವಿನಿ ನಿಟಾಲಿ, ಎಚ್. ಆರ್ ವಿಭಾಗದ ಮುಖ್ಯಸ್ಥೆ ನಿಶಾದ್ ಮುಧೋಳ ಪಾಲ್ಗೊಂಡಿದ್ದರು.
ವರದಿ:ಸುಧೀರ್ ಕುಲಕರ್ಣಿ




