ಗುರುಮಠಕಲ್ : ಗುರುಮಠಕಲ್ ನಿಂದ ಸೇಡಂಗೆ ಹೂಗುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿರುವ ದು ನೋಡಿದರೆ ಸಾಕು ಪಟ್ಟಣಗಳೆಗೆ ಹೋಗಲು ಹಿಂದೇಟು ಹಾಕುತ್ತಿರುವ ಸಾರ್ವಜನಿಕರು
ಗುರುಮಠಕಲ್ ಕಾಕಲವಾರ ಎಂ.ಟಿ.ಪಲ್ಲಿ ಸಿದ್ದಾಪುರ (ಬಿ) ಮತ್ತು ಇನ್ನಿತರ ಗ್ರಾಮಳಿಂದ ಸೇಡಂ ಕಡೆ ಹೋಗುವ ರಸ್ತೆಗಳಲ್ಲಿ ತೆಗ್ಗು ದಿನ್ನೆಗಳಿಂದ ಸಂಚಾರ ಸಂಪೂರ್ಣ ಆಳಾಗಿದ್ದು ರೈತನ ಎತ್ತಿನ ಬಂಡಿ, ಟಂಟಂ, ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳು ಹೋಗುವುದು ಕಷ್ಟವಾಗಿದ್ದು ರೈತರು ತೀವ್ರ ತೊಂದರೆಯಲ್ಲಿ ನರಳುತ್ತಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ಜಾಲೆ ಕಂಟಿಗಳು ಬೆಳೆದಿದ್ದು, ಎದುರಿಗೆ ಬರುವ ವಾಹನಗಳು ಕಾಣದೆ ಅಪಘಾತದ ಭೀತಿ ಉಂಟಾಗಿದೆ.
ಭೀಮಶಪ್ಪ ಮದುಮಾಡುದುಗು ಎಂ ಟಿ ಪಲ್ಲಿ ಸಾಮಾಜಿಕ ಹೋರಾಟಗಾರ ಮಾತನಾಡಿ ರಸ್ತೆಯ ದುಸ್ಥಿತಿಯಿಂದ ದನಕರುಗಳು, ವಾಹನ ಸವಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಎಲ್ಲರೂ ಕಷ್ಟದಲ್ಲಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮಸ್ಯೆ ಕಡೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ರವಿ ಬುರನೋಳ್




