ಗದಗ: ಪ್ರೇಮಿಗಳಿಬ್ಬರೂ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ನಡೆದಿದೆ.
ಅಪ್ಪಣ್ಣ ಗೊರಕಿ (28) ಹಾಗೂ ಲಲಿತಾ ಹಲಗೇರಿ (21) ಮೃತ ದುರ್ದೈವಿ. ಏಪ್ರಿಲ್ 4ರಂದು ಲಲಿತಾಗೆ ಬೇರೆ ಯುವಕನೊಂದಿಗೆ ವಿವಾಹವಾಗಿತ್ತು.
ಆದರೆ ಈಗ ಲಲಿತಾ ಅಪ್ಪಣ್ಣ ಗೊರಕಿ ಎಂಬಾತನೊಂದಿಗೆ ನೇಣಿಗೆ ಕೊರಳೊಡ್ಡಿದ್ದಾಳೆ.ಘಟನಾ ಸ್ಥಳಕ್ಕೆ ನರೇಗಲ್ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.