ಗೆಳತಿ ಖಾಸಗಿ ಫೋಟೋ, ವಿಡಿಯೋ ಬೆದರಿಸಿ ಚಿನ್ನ ವಸೂಲಿ ಮಾಡಿದ ಗೆಳೆಯ 

Bharath Vaibhav
ಗೆಳತಿ ಖಾಸಗಿ ಫೋಟೋ, ವಿಡಿಯೋ ಬೆದರಿಸಿ ಚಿನ್ನ ವಸೂಲಿ ಮಾಡಿದ ಗೆಳೆಯ 
CRIME
WhatsApp Group Join Now
Telegram Group Join Now

ಬೆಂಗಳೂರು: ಪ್ರಿಯಕರನ ಜೊತೆಗಿರುವ ಖಾಸಗಿ ಫೋಟೋ, ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಯುವತಿಯಿಂದ ಆಕೆಯ ಸ್ನೇಹಿತನೇ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಸೂಲಿ ಮಾಡಿದ್ದಾನೆ.

ಬ್ಲಾಕ್ ಮೇಲ್ ಮಾಡಿದ ಆರೋಪಿ ಆರ್‌ಟಿ ನಗರದ ಅರ್ಪಿತ್ ಎಂಬವನನ್ನು ಜಯನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.ಆತ ಮಾರಾಟ ಮಾಡಿದ್ದ ಅಂಗಡಿಗಳನ್ನು ಪತ್ತೆ ಹಚ್ಚಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಮನೆಯಲ್ಲಿಟ್ಟಿದ್ದ 260 ಗ್ರಾಂ ಚಿನ್ನಾಭರಣ ಕಾಣೆಯಾಗದಿದ್ದಾಗ ಜ್ಯುವೆಲ್ಲರಿ ಶಾಪ್ ಮಾಲೀಕ ಮನೆಯವರನ್ನು ವಿಚಾರಿಸಿದ್ದಾರೆ. ಈ ವೇಳೆ ಅವರ ಪುತ್ರಿ ಗೆಳೆಯನಿಗೆ ಚಿನ್ನಾಭರಣ ಕೊಟ್ಟಿದ್ದೇನೆ. ಮುಂಬೈನಿಂದ ಓದಲು ಬಂದಿದ್ದ ಆತ ಓದು ಮುಗಿದ ನಂತರ ಚಿನ್ನದ ಸಮೇತ ಮುಂಬೈಗೆ ತೆರಳಿದ್ದಾನೆ ಎಂದು ಹೇಳಿದ್ದಾಳೆ.

ಆಕೆಯ ಪೋಷಕರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪೋಲೀಸರು ತನಿಖೆ ಆರಂಭಿಸುತ್ತಿದ್ದಂತೆ ಅಸಲಿ ವಿಷಯ ಬಯಲಾಗಿದೆ. ಯುವತಿ ಮತ್ತು ಆಕೆಯ ಪ್ರಿಯಕರ ಹಾಗೂ ಬಂಧಿತ ಆರೋಪಿ ಅರ್ಪಿತ್ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಯುವತಿ ಮತ್ತು ಆಕೆಯ ಪ್ರಿಯಕರನ ಖಾಸಗಿ ವಿಡಿಯೋಗಳನ್ನು ಮಾಡಿಕೊಂಡಿದ್ದ ಅರ್ಪಿತ್ ನಂತರದಲ್ಲಿ ಅವುಗಳನ್ನು ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಯುವತಿಯಿಂದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದುಕೊಂಡಿದ್ದ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!