ಭಾಲ್ಕಿ : ಒಳ ಮೀಸಲಾತಿ ಹೆಸರಿನಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ನಡೆಯುತ್ತಿರುವ ಅನ್ಯಾಯ ವಿರೋಧಿಸಿ ಮಾ.18 ರಂದು ಎಲ್ಲಾ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾದ್ಯಕ್ಷ ಎಮ್.ಪಿ.ರಾಠೋಡ್ ಮತ್ತು ಕಾರ್ಯದರ್ಶಿ ಸುರೇಶ ಹುಬಳಿಕರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಭೋವಿ, ಲಮಾಣಿ, ಕೊರವ, ಕೊಂಚ, ಜಾಂಬವ, ವಡ್ಡರ ಸೇರಿದಂತೆ 101 ಜಾತಿಗಳು ಪರಿಶಿಷ್ಠ ಜಾತಿಗಳ ಪಟ್ಟಿಯಲಿವೆ.
ಆದರೆ ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿ ಹೆಸರಿನಲ್ಲಿ
ಇತ್ತೀಚೆಗೆ ನಡೆದ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಗುಂಪಿಗೆ ಶೂನ್ಯ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಮೂಲಕ ಛಲವಾದಿ,ಬಂಜಾರ, ಭೋವಿ, ಕೊರಮ, ಕೊರಚ, ವಡ್ಡರ, ಕೊಂಚ, ಬುರುಬುರ ಪೋಚಮ್ಮ ಸೇರಿದಂತೆ 70ಕ್ಕೂ ಹೆಚ್ಚು ಜಾತಿಗಳಿಗೆ ಘೋರ ಅನ್ಯಾಯವಾಗಿದೆ.
ಈ ಮೂಲಕ ಎಚ್ಚೆತ್ತುಕೊಂಡ ಸರ್ಕಾರ ಪರಿಶಿಷ್ಟ ಜಾತಿಗಳ ವರ್ಗಿಕರಣ ಕೈಬಿಟ್ಟು ಹಿಂದಿನ ನಿಯಮದಂತೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ.
ತತ್ವರಿತವಾಗಿ ಹಿಂದಿನ ನಿಯಮದಂತೆ ನೇಮಕಾತಿ ಮತ್ತು ಶಿಕ್ಷಣ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು
ಒತ್ತಾಯಿಸಿದರು.
ಒಕ್ಕೂಟದ ಮುಖಂಡ ಸಂಜೀವ ಸಿಂಧೆ ಮಾತನಾಡಿ, ಮಾ.18 ರಂದುನಡೆಯಲಿರುವ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪಾಪವ್ವಾ ಚೌಕಮೂಲಕ ಪ್ರಾರಂಭವಾಗಿ, ಮಹಾತ್ಮಾಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ತಹಸೀಲ ಕಚೇರಿಯಲ್ಲಿ ಸಮಾವೇಶ ಗೊಳ್ಳುವುದು. ನಂತರ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಅದ್ಯಕ್ಷ ವಿಲಾಸ ಮಾತನಾಡಿ, ಪ್ರತಿಭಟನಾ ಮೆರವಣಿಗೆಯಲ್ಲಿ ಹಳ್ಳಿಗಳಿಂದಲೂ ಬಂಜಾರಾ ಸೇರಿದಂತೆ ಎಲ್ಲಾ ಸಮುದಾಯದ ಜನರು ಆಗಮಿಸುತ್ತಲಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ಸುಮಾರು 5 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಭಾಷ ಚವ್ಹಾಣ, ಸಂಘದ ತಾಲೂಕು ಅಧ್ಯಕ್ಷ ಸೂಬಾಷ ಆಡೆ, ಭೊವಿ ವಡ್ಡರ ಸಮಾಜದ ರಾಜಕುಮಾರ ಸಿಂಧೆ, ವೆಂಕಟ ಸಿಂಧೆ, ದತ್ತು ಪವಾರ, ಪ್ರಕಾಶ ಸಂಪಂಗೆ , ಸುರೇಶ ಚವ್ಹಾಣ, ಚಂದು ಸಂಪಂಗೆ, ಸಂಜು ಸಿಂದೆ, ಪ್ರಮುಖರಾದ ಸಿದ್ದಪ್ಪ ಪೋಚಮ್ಮ, ಸಂತೋಷ ಮಾನೆ, ಪ್ರಕಾಶ ಯದವಾ, ಜಗನ್ನಾಥ ಸಂಪಂಗೆ, ಲಾಲು ರಾಮಲೆ, ರಂಗಲಾಲ ಜಾಧವ, ವಿಶ್ವನಾಥ ಸಂಪಂಗೆ, ನಾಗನಾಥ ಸಂಪAಗೆ, ಸುನೀಲ ಬುಡ್ಡಣ್ಣ, ವಿಲಾಸ ರಾಠೋಡ, ಸುಭಾಷ ರಾಠೋಡ, ಮಾನಾಜಿ ಚವ್ಹಾಣ,ವಿಜಯಕುಮಾರ ಜಾಧವ, ಸಂತೋಷ ಮಾನೆ, ಮುಕೇಶ ಚವ್ಹಾಣ, ಬಸವರಾಜ ಸಂಪAಗೆ, ವಿಶ್ವನಾಥ ಸಂಪAಗೆ, ಸಂತೋಷ ಮಾನೆ, ಬಾಲಾಜಿ ಜಾಧವ, ದಿಲೀಪ ಜೈವಂತರಾವ ಸೇರಿದಂತೆ ಹಲವರು ಇದ್ದರು.
ವರದಿ : ಸಂತೋಷ ಬಿಜಿ ಪಾಟೀಲ




