ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹರಳಯ್ಯ್ ಮೂರ್ತಿಗೆ ಮಾಲಾರಪನೆ ಮಾಡಿ ಹರಳಯ್ಯ್ ವೃತ್ತಿಯಿಂದ ಯಿಂದ ತಹಸೀಲ್ದಾರ್ ಕಚೇರಿವರಿಗೆ ಬ್ರಹತ್ ಪ್ರತಿಭಟನೆ ಮಾಡಿ ತಾಲೂಕ ದಂಡಧಿಕಾರಿಯಾದ ಪ್ರಕಾಶ್ ಹೊಳೆಪ್ಪಗೋಳ ಮುಖಾಂತರ ರಾಷ್ಟಪತಿಗೆ ಮನವಿ ಸಲ್ಲಿಸಿದರು.
ರಾಮದುರ್ಗ ತಾಲೂಕಾ ಸಂವಿಧಾನ ಸಂರಕ್ಷಣಾ ಸಮಿತಿ ವ್ಕಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ನೀಡುತ್ತಿರುವ ಮನವಿ (ಮಾನ್ಯ ತಹಶೀಲ್ದಾರರು, ರಾಮದುರ್ಗ ಇವರ ಮುಖಾಂತರ) ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಭಾರತವನ್ನು ಒಂದು ಸರ್ವಧರ್ಮ ಸಮಭಾವಿ ಹಾಗೂ ಎಲ್ಲರಿಗೂ ಇತರ ಸ್ವಾತಂತ್ರ್ಯಗಳ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿ ಮಾಡುವ ಸಂವಿಧಾನವು 1950 ಜನವೇರಿ 26 ರಂದು ಜಾರಿಗೆ ಬಂತು. ಸಂವಿಧಾನದಲ್ಲಿ ಈ ದೇಶದ ಜನರಿಗೆ ಹಲವು ಮೂಲಭೂತ ಹಕ್ಕುಗಳನ್ನು ಕೊಡಲಾಗಿದೆ. ಅದರಲ್ಲಿ ಆರ್ಟಿಕಲ್ 25, 26, 27 ಮತ್ತು 28 ಈ ದೇಶದ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಖಾತ್ರಿ ಮಾಡುತ್ತದೆ.
ಈ ದೇಶದ ಎಲ್ಲ ಜನರಿಗೆ ಅವರು ಬಯಸುವ ಧರ್ಮವನ್ನು ಆಚರಿಸುವ ಹಾಗೂ ಆಚರಿಸದೇ ಇರುವ ಹಕ್ಕುಗಳನ್ನು ಕೊಡತ್ತದೆ ಹಾಗೂ ಆರ್ಟಿಕಲ್ 26ರ ಎಬಿಸಿಡಿ ಕಲಂಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆ ಮಾಡುವ, ಸ್ಥಿರ ಹಾಗೂ ಚರಾಸ್ತ್ರಿಗಳನ್ನು ಹೊಂದುವ ಮತ್ತು ಅವುಗಳನ್ನು ಕಾನೂನು ರೀತ್ಯ ನಿರ್ವಹಣೆ ಮಾಡುವ ಹಕ್ಕನ್ನು ಕೊಡುತ್ತದೆ ಆದರೆ ಕೇಂದ್ರ ಸರಕಾರಕ್ಕೆ ಇವೆಲ್ಲ ಕಾನೂನುಗಳು ಗೊತ್ತಿದ್ದರೂ ಮುಸ್ಲಿಂರ ಮೇಲೆ ಆಕ್ರಮಣ ಮಾಡಲು ನಕ್ಷ ತಿದ್ದುಪಡಿ ಕಾಯ್ದೆ ತಂದಿದೆ. ಈ ದೇಶದ ರಹವಾಸಿಗಳಾದ ನಾವು, ತಾವು ತಂದಿರುವ ವಕ್ಷ ಕಾಯ್ದೆಯನ್ನು ನಾವು ಈ ಕೆಳಗಿನ ಅಂಶಗಳಿಗಾಗಿ ವಿರೋಧಿಸುತ್ತೇವೆ. ಇದು ಕೂಡಲೇ ವಾಪಸ್ಸಾಗಬೇಕು.
1. ದೇಶದಲ್ಲಿ ಸಿಕ್ಕ ಸಿಕ್ಕ ಭೂಮಿಗಳು ವಕ್ಷ ಎಂದು ಬರೆದುಕೊಳ್ಳಲಾಗಿದೆ. ಉದಾಹರಣಗೆ ತಮೀಳುನಾಡಿನ ತಿರುಚುರಯ್ಯ ಗ್ರಾಮದಲ್ಲಿ ಸಾವಿರಾರು ಎಕರೆ ಭೂಮಿ ವಕ್ಷ ಎಂದು ಬರೆದುಕೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತ ಸಚಿವರ ಮಾತು ಸುಳ್ಳು. ಸಿಕ್ಕ ಸಿಕ್ಕ ಭೂಮಿ ವಕ್ಷದಲ್ಲಿ ಬರುತ್ತದೆಯೇ? ಇದನ್ನು ಪರಿಶೀಲಿಸಲು ಪಾರ್ಲಿಮೆಂಟ್ ಸದಸ್ಯರ ಕಮೀಟಿ ತಮೀಳುನಾಡಿನ ತಿರುಚುರಯ್ ಗೆ ಹೋಗಿ ಪರಿಶೀಲಿಸಿದಾಗ ಕೇಂದ್ರ ಅಲ್ಪಸಂಖ್ಯಾತರ ಸಚಿವರ ಮಾತು ಸುಳ್ಳಾಗಿದೆ. ಇಂತಹ ಸುಳ್ಳುಗಳನ್ನು ಹೇಳಿ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದು ಸಂವಿಧಾನ ವಿರೋಧಿಯಾಗಿದೆ.
2. ಹಿಂದಿನ ವಕ್ಷ ಕಾಯ್ದೆಯಲ್ಲಿ ಸರಕಾರಿ ಭೂಮಿಯಲ್ಲಿ ಸುಮಾರು ವರ್ಷಗಳಿಂದ ಮಸೀದಿ ಅಥವಾ ಖಬರಸ್ಥಾನಗಳು ಇದ್ದರೇ ಮತ್ತು ಜನರಿಗೆ ಅದರಿಂದ ಬಹಳ ಪ್ರಯೋಜನಯಾಗಲಿದೆ.
ಈ ಸಂಧರ್ಭದಲ್ಲಿ DSS ಮುಖಂಡ, B R ದೋಡಮನಿ, ಜನಪರ ಟ್ರೇಸ್ಟ್ ರಾಜ್ಯಾಧ್ಯಕ್ಷ, ಸುಭಾಸ್ ಗೋಡಕೆ, ಗೈಬು ಜೈನೆಖಾನ್,ನಾಗಪ್ಪ ಸಂಗೊಳ್ಳಿ,ಕಾರ್ಮಿಕ ಸಂಘಟನೆ,ಪರ್ವತಗೌಡ ಪಾಟೀಲ,ಪಂಚಮಶಾಲಿ ಮುಖಂಡ, ಪಡಿಯಪ್ಪ ಕ್ವಾರಿ ಮತ್ತು ನಿಂಗಪ್ಪ ಕರಿಗಾರ ಕರ್ನಾಟಕ ಪ್ರದೇಶ ಕುರುಬರ ಸಂಘ, ಶಶಿಕಾಂತ ನೆಲ್ಲೂರ ರಾಜು ಶಲವಡಿ ಎಸ್.ಜಿ. ಚಿಕ್ಕನರಗುಂದ
ಸಮೂದಾಯ ಘಟಕ ರಾಮದುರ್ಗ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ,ಅಧ್ಯಕ್ಷ, ಶಬ್ಬೀರ ಕಾಜಿ, ಶಫಿ ಬೆಣ್ಣಿ,ಜಾಮಿಯಾ ಮಸ್ಜಿದ್ ಮೌಲಾನಾ, ಜಹುರ್ ಹಾಜಿ, ಅಬ್ದುಲಕಾದಿರ ಸರಕಾಜಿ, ಮಾಜಿ ZP ಸದಸ್ಯ, ಜಹುರ್ ಹಾಜಿ,SDPI ಪಕ್ಷದ ಮುಖಂಡ ಸಾದಿಕ್ ದಿಲಾವರ್,ಎಲ್ಲರು ಮಾತನಾಡಿದರು.
ವರದಿ : ಮಂಜುನಾಥ ಕಲಾದಗಿ




