ಸಿಂಧನೂರು : ತಾಲೂಕಿನ ಬೂದಿವಾಳ ಸೊಸೈಟಿ ಜೋಳ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಆಕ್ರಮ ನೊಂದಾಣೆ ಮತ್ತು ಅಧಿಕಾರಿಗಳು ಶಾಮೀಲಾಗಿ ನಿಮ್ಮ ಜೋಳದಲ್ಲಿ ಹುಳಗಳಿವೆ ಜಿಡಿ ಇದೆ ಎಂದು ರೈತರಿಗೆ ಬೆಂಬಲ ಬೆಲೆ ಸಿಗದೆ 30 ರಿಂದ 50 ರೂಪಾಯಿ ವರಗೆ ಹೆಚ್ಚುವರಿ ಹಣವನ್ನು ರೈತರಿಂದ ಜೋಳ ಖರೀದಿ ಕೇಂದ್ರದಲ್ಲಿ ವಸೂಲಿ ಮಾಡುತ್ತಿದ್ದರೆ ಎಂದು ರೈತ ಮುಖಂಡ ನಾಗರಾಜಗೌಡ ಗಂಭೀರವಾಗಿ ಆರೋಪಿಸಿದ್ದಾರೆ.
ತಾಲೂಕಿನ ಬೂದಿವಾಳ ಸೊಸೈಟಿ ಕೇಂದ್ರವು ಮಾಡಸಿರವರ ಗ್ರಾಮದಲ್ಲಿ ಜೋಳ ಖರೀದಿ ಪ್ರಾರಂಭಿಸಿದ್ದು, ಸಿಕ್ಕ ಅವಕಾಶದಲ್ಲೇ ಹಣ ಮಾಡಿಬಿಡೋಣ ಎನ್ನುವ ಮನೋಭಾವನೆಯಿಂದ ಅಧಿಕಾರಿಗಳು ರೈತರಿಂದ ಹಣ ವಸೂಲಿಗೆ ಮುಂದಾಗಿದ್ದಾರಾ ಎನ್ನುವ ಅನುಮಾನ ರೈತರು ಮಾಡುತ್ತಿರುವ ಗಂಭೀರ ಆರೋಪವಾಗಿದೆ ಜೋಳ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳಿಂದ ತಪ್ಪಿಸಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಮತ್ತು ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ತಾಲೂಕಾಡಳಿತ ಸೂಚನೆ ನೀಡಿಬೇಕಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವರದಿ : ಬಸವರಾಜ ಬುಕ್ಕನಹಟ್ಟಿ




