Ad imageAd image

ಕಲ್ಯಾಣ ಮಂಟಪರೆಗೂ ಬಂದು ಮದುವೆ ಒಲ್ಲೆ ಎಂದ ಮದುಮಗಳು

Bharath Vaibhav
ಕಲ್ಯಾಣ ಮಂಟಪರೆಗೂ ಬಂದು ಮದುವೆ ಒಲ್ಲೆ ಎಂದ ಮದುಮಗಳು
WhatsApp Group Join Now
Telegram Group Join Now

ಚಿಕ್ಕಮಗಳೂರು : ಚೌಟ್ರಿವರೆಗೂ ಬಂದ ಮದುಮಗಳೊಬ್ಬಳು ತನಗೆ ಈ ವಿವಾಹ ಬೇಡ ಎಂದು ಹಿಂದಿರುಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ.

ವರನ ಮೇಲೆ ರೇಪ್ ಕೇಸ್ ಇದ್ದು, ಆತ ಕುಡುಕನಾಗಿರುವ ಕಾರಣ ತನಗೆ ಈ ವಿವಾಹ ಇಷ್ಟವಿಲ್ಲ ಎಂದು ವಧು ವಾಪಸ್​​ ಆಗಿದ್ದಾಳೆ.

ಶೃಂಗೇರಿಯ ಈಡಿಗರ ಸಮುದಾಯ ಭವನದಲ್ಲಿ ಶೃಂಗೇರಿಯ ಯುವಕನ​​ ಜೊತೆ ಬಾಳೆಹೊನ್ನೂರಿನ ಯುವತಿ ವಿವಾಹ ಇಂದು ನಿಶ್ಚಯಗೊಂಡಿತ್ತು. ಎಷ್ಟೇ ಮನವೊಲಿಸಲು ಯತ್ನಿಸಿದ್ರೂ ಮದುವೆಗೆ ಯುವತಿ ಒಪ್ಪಿಲ್ಲ ಎನ್ನಲಾಗಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!