Ad imageAd image
- Advertisement -  - Advertisement -  - Advertisement - 

ಅತಿವೃಷ್ಟಿಗೆ ಒಳಗಾದ ಹಳ್ಳಿಗಳಲ್ಲಿ ಗಂಜಿಕೇಂದ್ರಗಳನ್ನು ಪ್ರಾರಂಭಿಸಬೇಕು: ಬಿಎಸ್ಪಿ ರೇವಣಸಿದ್ಧ ಎಸ್ ಶಿಂದೆ ಆಗ್ರಹ.

Bharath Vaibhav
ಅತಿವೃಷ್ಟಿಗೆ ಒಳಗಾದ ಹಳ್ಳಿಗಳಲ್ಲಿ ಗಂಜಿಕೇಂದ್ರಗಳನ್ನು ಪ್ರಾರಂಭಿಸಬೇಕು: ಬಿಎಸ್ಪಿ ರೇವಣಸಿದ್ಧ ಎಸ್ ಶಿಂದೆ ಆಗ್ರಹ.
WhatsApp Group Join Now
Telegram Group Join Now

ಸೇಡಂ:- ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರ ಬಹಳ ಹದಗೆಟ್ಟಿದೆ ಕೆಲವರ ಮನೆಯಲ್ಲಿ ನೀರು ನುಗ್ಗಿ ಆಹಾರಧಾನ್ಯಗಳ ನೀರು ಪಾಲಾಗಿವೆ.ಕಾಗಿನ ನದಿ ತೀರದ ಹಳ್ಳಿಗಳಲ್ಲಿ ಜನರ ಬದುಕು ರೋಡ್ ಪಾಲಾಗಿದೆ.

ಇಂತಹ ಹಳ್ಳಿಗಳಲ್ಲಿ ಮತ್ತು ಅತಿವೃಷ್ಟಿಗೆ ಒಳಗಾದ ಜನರಿಗೆ ಉಪಯೋಗವಾಗುವಂತೆ ಗಂಜಿಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗೂ ಮನೆಗೆ ನೀರು ನುಗ್ಗಿದ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡಬೇಕೆಂದು ಬಹುಜನ ಸಮಾಜ ಪಕ್ಷ ವತಿಯಿಂದ ರೇವಣಸಿದ್ಧ ಎಸ್ ಶಿಂದೆ ಅವರು ಪತ್ರಿಕಾ ಪ್ರಕಟಣೆ ಮುಖಾಂತರ ಆಗ್ರಹ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ರೈತರ ಹೊಲಗಳಲ್ಲಿ ನೀರು ನಿಂತು ಬೆಳೆ ಕಟಾವು ಮಾಡುವ ಮುನ್ನವೆ ಬಹಳ ಹಾನಿಯಾಗಿದೆ ಆದ್ದರಿಂದ ಪ್ರತಿ ಎಕರೆಗೆ ಸುಮಾರು ಹತ್ತು ಸಾವಿರ ರೂಪಾಯಿ ಪರಿಹಾರ ನೀಡಿ ನೊಂದ ರೈತರಿಗೆ ನೆರವು ಮಾಡಬೇಕು ಹಾಗೂ ನೀರು ನುಗ್ಗಿದ ಪ್ರತಿ ಮನೆಗೆ 20 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಶಿಂದೆ ಹೇಳಿದ್ದಾರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!