ಕಾಳಗಿ:ತಥಾಗತ ಗೌತಮ ಬುದ್ಧರ ಜಯಂತಿಯನ್ನು ವಿಶ್ವದೆಲ್ಲೆಡೆ ಆಚರಿಸುತ್ತಿರುವಾಗ ಈ ಪವಿತ್ರವಾದ ವೈಶಾಖ ಬುದ್ಧ ಪೂರ್ಣಿಮೆಯನ್ನು ಈ ವರ್ಷ ಕರ್ನಾಟಕ ರಾಜ್ಯ ಸರ್ಕಾರ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಬೌದ್ಧರ ಪದ್ಧತಿಯಂತೆ ಆಚರಿಸಲು ವಿವಿಧ ಇಲಾಖೆ ಮುಖ್ಯಸ್ಥರಿಗೆ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ, ಆದರೆ ಇಡೀ ಕಾಳಗಿ ತಾಲೂಕಕ್ಕೆ ಕೇಂದ್ರ ಬಿಂದುವಾಗಿ ಆಡಳಿತ ನಡೆಸುವ ತಹಸೀಲ್ ಕಾರ್ಯಾಲದಲ್ಲಿ ಬುದ್ಧ ಪೂರ್ಣಿಮಾ ಆಚರಣೆ ಮಾಡಿಲ್ಲ, ಆದ್ದರಿಂದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ತಹಸೀಲ್ದಾರ್ ಕಾರ್ಯಾಲಯಕ್ಕೆ ಬೀಗಾ ಹಾಕಿ ಎಲ್ಲಾ ದಲಿತ ಮುಖಂಡರು ಪ್ರತಿಭಟನೆ ಮಾಡಿದ್ದರು, ಇದೆ ವೇಳೆ ಗುರುನಂದೇಶ್ ಕೋಣಿನ್ ಆಕ್ರೋಶ ಹೊರಹಾಕಿದ್ದರು, ನಂತರ ಪಂಡಿತ್ ಬೆಳಮಗಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಕಾಳಗಿ ಅವರು ಸಹ ಬುದ್ಧ ಜಯಂತಿ ಆಚರಣೆಯನ್ನು ಸಾಯಂಕಾಲ 5:30 ಕ್ಕೆ ಆಚರಣೆ ಮಾಡಿದ್ದರು ಮಹಾ ಪುರುಷರ ಜಯಂತಿ ಆಚರಣೆ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದರು ಸಹ,ಇಷ್ಟು ನಿರ್ಲಕ್ಷ ವಹಿಸುವುದು ಸರಿಯಲ್ಲ ಎಂದು ಪರಮೇಶ್ವರ್ ಕಟ್ಟಿಮನಿ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕಾರ್ಯಲಯ ಪ್ರತಿಭಟನೆಯಲ್ಲಿ ನಾಗರಾಜ್ ಸಜ್ಜನ, ಕಲ್ಯಾಣರಾವ್ ಡೊಣ್ಣೂರು, ಶಂಕರ್ ಹೇರೂರ್,ಜಯಂತಿ ಸಮಿತಿ ಅಧ್ಯಕ್ಷ ಗಂಗಾಧರ್ ಮಾಡಬುಳ್, ಪ್ರಚಾರ ಸಮಿತಿ ಅಧ್ಯಕ್ಷ ರತನ್ ಕನ್ನಡಗಿ,ಅವಿನಾಶ್ ಕೊಡದೂರ್,ಪ್ರದೀಪ್ ಡೊಣ್ಣೂರ್, ಬಸವರಾಜ್ ಹೊಸಮನಿ, ಸುಧಾಕರ್ ಸಾಲಹಳ್ಳಿ, ಖತಲಪ್ಪ ಅಂಕನ್,ಸಿದ್ದು ನಾಗೂರ್,ಅರ್ಜುನ್ ಚಿಂಚೋಳಿ, ಸೂರ್ಯಕಾಂತ ಶರ್ಮಾ, ಅನೇಕ ದಲಿತ ಮುಖಂಡರು ಭಾಗಿ ಇದ್ದರು.
ವರದಿ : ಹಣಮಂತ ಕುಡಹಳ್ಳಿ




