ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಲಿ. ಶ್ರೀ ಸಿದ್ದೇಶ್ವರ ಸ್ವಾಮೀಜಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ವಿಧ್ಯಾರ್ಥಿಗಳು ಶಿಕ್ಷಕರ ಪಾದಗಳಿಗೆ ಪುಷ್ಪ ಸಲ್ಲಿಸುವುದರ ಮೂಲಕ ಗುರು ಪೂರ್ಣಿಮಾ ದಿನವನ್ನು ಅತ್ಯಂತ ಅರ್ಥ ಪೂರ್ಣವಾಗಿ ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕೋತನಟ್ಟಿ ಗ್ರಾಮದ ಶ್ರೀ ಸಿದ್ದಯ್ಯ ಸ್ವಾಮೀಜಿ ಅವರು ಭಾಗವಹಿಸಿ ಮಾತನಾಡಿ ಬುದ್ದ ಪೂರ್ಣಿಮಾ ದಿನವನ್ನು ಗುರುಗಳ ಪಾದಕ್ಕೆ ಪುಷ್ಪ ಸಲ್ಲಿಸಿದರೆ ಸಾಲದ ಅವರು ನೀಡಿದ ಶಿಕ್ಷಣವನ್ನು ಪಡೆದು ಅವರ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತೆ.
ಆದರ್ಶ ಶಿಕ್ಷಣ ಸಂಸ್ಥೆಯಲ್ಲಿನ ಶಿಸ್ತು ಮತ್ತು ಸಂಸ್ಕಾರ ಇತರೆ ಶಾಲೆಗಳಲ್ಲಿ ಸಿಗುವಂತಾಗಬೇಕು ಎಂದು ನುಡಿದರು. ಸಂಸ್ಥೆಯ ಮುಖ್ಯಸ್ಥ ಅಪ್ಪಾಸಾಬ ಶಿ ತೆಲಸಂಗ ಮುಖ್ಯೋಪಾಧ್ಯಾಯರಾದ ಡಿ ಎಲ್ ಕದಂ ಸೇರಿದಂತೆ ಶಾಲೆಯ ಶಿಕ್ಷಕರು ಶಿಕ್ಷಕಿಯರು ಮುದ್ದು ಮಕ್ಕಳು ಉಪಸ್ಥಿತಿ ಇದ್ದರು.




