ಕಾಳಗಿ :ಭಗವಾನ್ ಗೌತಮ ಬುದ್ಧರ 2569 ನೇ ಜಯಂತಿಯನ್ನು ಆಚರಣೆ ಮಾಡಲು ರಾಜ್ಯ ಸರ್ಕಾರ ಸುತ್ತೋಲೆ ಪ್ರಕಾರ ಆದೇಶಿಸಲಾಗಿದೆ. ಕಾಳಗಿ ತಾಲೂಕಿನ ತಾಲೂಕಾ ದಂಡಾಧಿಕಾರಿಗಳು ಈ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ, ತಾಲೂಕಾ ಮಟ್ಟದ ಅಧಿಕಾರಿಗಳ ಹಾಗೂ ಸಮಾಜದ ಮುಖಂಡರುಗಳನ್ನು ಪೂರ್ವಭಾವಿಯಾಗಿ ಸಭೆ ಕರೆದಿರುವುದಿಲ್ಲ. ಪ್ರೋಟೋಕಲ್ ಕೂಡ ಪಾಲನೆ ಮಾಡುವಲ್ಲಿ ನಿರ್ಲಕ್ಷತೋರಿ ಶಾಂತಿ ಪ್ರೀಯ ಭಗವಾನ್ ಗೌತಮ ಬುದ್ಧರ ಜಯಂತಿಗೆ ಅಗೌರವ ತೋರಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ. ತಾಲೂಕಿನ ವ್ಯಾಪ್ತಿಯಲ್ಲಿ 32 ಇಲಾಖೆಗಳನ್ನೋಳಗೊಂಡಿದ್ದೇ. ಯಾವುದೇ ಒಬ್ಬ ತಾಲೂಕಾ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ. ಜಯಂತಿ ಆಚರಣೆಗೆ ತಾಲೂಕಾ ಅಧಿಕಾರಿಗಳು ಬಂದಿರುವುದಿಲ್ಲ. ಫೋನ್ ಕರೆ ಮಾಡಿದ್ದರೆ ನಮಗೆ ಗೊತ್ತಿಲ್ಲವೆಂದು ಹಲವು ಅಧಿಕಾರಿಗಳು ಹೇಳುತ್ತಿದ್ದಾರೆ, ತಾಲೂಕಾ ತಹಸಿಲ್ದಾರ ಫೋನ್ ಸ್ವೀಚ್ ಆಫ್ ಮಾಡಿದ್ದಾರೆ.
ಸಂಬಂಧಪಟ್ಟ ಮೇಲಾಧಿಕಾರಿಗಳು ಕಾಳಗಿ ತಹಸಿಲ್ದಾರ್ ರವರನ್ನು ಈ ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು, ಎಂದು ಗುರುನಂದೇಶ್ ಕೋಣಿನ್ ಹಾಗೂ ಎಲ್ಲಾ ದಲಿತ ಮುಖಂಡರು ಆಗ್ರಹಿಸಿದರು.
ವರದಿ : ಹಣಮಂತ ಕುಡಹಳ್ಳಿ




