Ad imageAd image

ಬುದ್ಧಗಯಾ ಮಹಾಬೋಧಿ ಮಹಾ ವಿಹಾರ ಮುಕ್ತಿಗಾಗಿ 15.ರಂದು ಪ್ರತಿಭಟನೆ

Bharath Vaibhav
ಬುದ್ಧಗಯಾ ಮಹಾಬೋಧಿ ಮಹಾ ವಿಹಾರ ಮುಕ್ತಿಗಾಗಿ 15.ರಂದು ಪ್ರತಿಭಟನೆ
WhatsApp Group Join Now
Telegram Group Join Now

ಯಳಂದೂರು  : ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಬುದ್ಧ ಧ್ಯಾನ ಕೇಂದ್ರದಲ್ಲಿ ಬುದ್ಧಗಯಾ ಮಹಾಬೋಧಿ ಮಹಾ ವಿಹಾರ ಮುಕ್ತಿಗಾಗಿ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸುವ ಕುರಿತು ಪತ್ರಿಕೆ ಗೋಷ್ಠಿ ನೆಡೆಸಲಾಯಿತು

ಹೊನ್ನೂರು ಮಹಾಮನ ಬುದ್ಧ ವಿಹಾರದ ಪ್ರಧಾನ ಬಿಕ್ಕುಗಳಾದ ಭಂತೆ ಬುದ್ಧರತ್ನ ರವರು ಮಾತನಾಡಿ
ಭಗವಾನ್ ಬುದ್ಧರು ಬೋಧಿ ಪ್ರಾಪ್ತಿ ಪಡೆದ ಪವಿತ್ರ ಪುಣ್ಯ ಭೂಮಿಯಲ್ಲಿ ಸುಮಾರು ಎರಡು ದಶಕಗಳಿಂದ ಬೌದ್ಧ ಭಿಕ್ಕುಗಳು ಮತ್ತು ಉಪಾಸಕರ ಸರ್ವರ ಒಡಗೂಡಿ ಹೋರಾಟಗಳು ನಡೆಯುತ್ತಿವೆ.

ಈ ಹೋರಾಟದ ಉದ್ದೇಶವೆಂದರೆ ಬಿಹಾರ ರಾಜ್ಯದ ಬುದ್ಧಗಯಾ ಮಹಾಬೋಧಿ ಮಹಾ ವಿಹಾರವನ್ನು ಬೌದ್ಧರಿಗೆ ವಹಿಸಬೇಕು ಹಾಗೂ 1949 ರ ಬಿ ಟಿ ಎಂ ಸಿ ಕಾಯ್ದೆ ರದ್ದು ಪಡಿಸಬೇಕು.

1949 ರ ಈ ಬಿ ಟಿ ಎಂ ಸಿ (ಬುದ್ಧಿಸ್ಟ್ ಟೆಂಪಲ್ ಮ್ಯಾನೇಜೈಂಟ್ ಕಮಿಟಿ) ಕಾಯ್ದೆಯ ಪ್ರಕಾರ ಇದರಲ್ಲಿ ನಾಲ್ಕು ಜನ ಹಿಂದೂ ಪುರೋಹಿತ ಶಾಹಿಗಳು, ನಾಲ್ಕು ಬೌದ್ಧ ಭಿಕ್ಕುಗಳು ಹಾಗೂ ಒಬ್ಬರು ಜಿಲ್ಲಾ ಅಧಿಕಾರಿಗಳು ಒಟ್ಟು ಒಂಭತ್ತು ಜನರು ಒಳಗೊಂಡ ಈ ಸಮಿತಿ ಇದನ್ನು ನಿರ್ವಹಿಸಿಕೊಂಡು ಬರುತ್ತಿರುವುದು ನಿಜವೇ ಆದರೂ ಇದರಲ್ಲಿ ಬೌದ್ಧರಿಗೆ ಅನ್ಯಾಯ ಆಗುತ್ತಿದೆ. ಈ ಸ್ಥಳದಲ್ಲಿ ಪುರೋಹಿತ ಶಾಹಿಗಳ ಪ್ರಾಬಲ್ಯ ಹೆಚ್ಚಾದಂತೆ ಬುದ್ಧನ ಪವಿತ್ರ ಸ್ಥಳದಲ್ಲಿ ಹಿಂದೂ ಆಚರಣೆಗಳು, ಪಿಂಡದಾನ ಈ ರೀತಿ ನಾನಾ ಬಗೆಯ ಆಚರಣೆಗಳು ನಡೆಯುತ್ತಿದ್ದು, ಬುದ್ಧರ ವೈಚಾರಿಕತೆ ಮತ್ತು ವೈಜ್ಞಾನಿಕತೆ ಈ ಸ್ಥಳದಲ್ಲಿ ನಾಶವಾಗುತ್ತಿದೆ.

ಈ ನಿಟ್ಟಿನಲ್ಲಿ ಹೇಗೆ ಚರ್ಚ್ ಗಳು ಕ್ರಿಶ್ಚಿಯನ್ನರ ಸುಪರ್ದಿಗೆ, ಮಸೀದಿಗಳು ಮುಸ್ಲಿಮರ ಸುಪರ್ದಿಗೆ, ಹಿಂದೂ ದೇವಸ್ಥಾನಗಳು ಪುರೋಹಿತರ ಸುಪರ್ದಿಗೆ ವಹಿಸಿದಿಯೋ ಹಾಗೆಯೇ ಬುದ್ದಗಯಾ ಮಹಾಬೋಧಿ ಮಹಾ ವಿಹಾರವನ್ನು ಬೌದ್ಧರ ಸುಪರ್ದಿಗೆ ವಹಿಸುವಂತೆ ಆಗ್ರಹಿಸಿ ಮಾನ್ಯ ರಾಷ್ಟ್ರಪತಿಯವರು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಈ ಮೂಲಕ ತಹಸಿಲ್ದಾ‌ರ್ ಅವರಿಗೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಮಾರ್ಚ್ 15, 2025 ರ ಶನಿವಾರದಂದು ಬೆಳಗ್ಗೆ 10.30 ಗಂಟೆಗೆ ಯಳಂದೂರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಯಿಂದ ಕೊಳ್ಳೆಗಾಲ ಮುಖ್ಯ ರಸ್ತೆಯ ಮಾರ್ಗವಾಗಿ ತಾಲ್ಲೂಕು ಆಡಳಿತ ಕಛೇರಿಯವರೆಗೆ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಸರ್ವ ಬೌದ್ಧ-ಭೀಮ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪ್ರತಿಭಟನಾ ಧರಣಿಯನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು

ಮಹಾವನ ಬುದ್ಧವಿಹಾರದ ಪ್ರಧಾನ ಭಿಕ್ಕು ಭಂತೆ ಬುದ್ಧರತ್ನ, ಬ್ಲಾಕ್ ಅಂಡ್ ವೈಟ್ ಪೌಂಡೇಷನ್ ಅಧ್ಯಕ್ಷರಾದ ಶಾಂತರಾಜು, ಬಹುಜನ ಸಮಾಜ ಪಕ್ಷದ ತಾಲ್ಲೋಕು ಪ್ರಧಾನ ಕಾರ್ಯದರ್ಶಿ ಮಲ್ಲಿಕ್ ಬಹುಜನ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಅಧ್ಯಕ್ಷರಾದ ಹೊನ್ನೂರು ಸುರೇಶ, ಮದ್ದೂರು ಪ್ರಕಾಶ್, ಆಟೋ ರಂಗಸ್ವಾಮಿ ಹಾಜರಿದ್ದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!