ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ನತ್ತಿಯಲ್ಲಿ ಐತಿಹಾಸಿಕ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ ಪ್ರಯುಕ್ತ ಕಾಳಗಿ ತಾಲೂಕ ವತಿಯಿಂದ ಬುದ್ಧರತ್ನ ಭಂತೇಜಿ ಯಳಂದೂರು ಮತ್ತು ಬಸವರಾಜ ಬೆಣ್ಣೂರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅವರ ನೇತೃತ್ವದಲ್ಲಿ ಇಂದು ಪೂರ್ವಭಾವಿ ಸಭೆ ಕರೆಯಲಾಯಿತ್ತು, ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸನ್ನತಿಯಲ್ಲಿ ನಡೆಯುತ್ತಿರುವ ಸದ್ದಮ ಸಜ್ಜನ ಪವಿತ್ರ ತ್ರಿಪಿಟಕ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಳಗಿ ತಾಲೂಕಿನ ಸರ್ವರಿಗೂ ಕರೆ ನೀಡಿದರು, ಮಹಾಭೋಧಿ ಸೊಸೈಟಿ ಬೆಂಗಳೂರ್ ಹಾಗೂ ಲೈಟ್ ಆಫ್ ದಿ ಬುದ್ಧ ಧಮ್ಮ ಪ್ರತಿಷ್ಠಾನ, ಅಂತರಾಷ್ಟ್ರೀಯ ತ್ರಿಪಿಟಕ ಪರಿಷತ್ತು ಮತ್ತು ಬೌದ್ಧ ಮಹಾಸೂಪ್ತ ಅಭಿವೃದ್ಧಿ ಸಂರಕ್ಷಣಾ ಸಮಿತಿ ಸನ್ನತಿ, ಸಯುಶ್ರಾಯದೊಂದಿಗೆ ಸನ್ನತಿಯಲ್ಲಿ ಪವಿತ್ರ ತ್ರಿಪಿಟಕ ಪಠಣವನ್ನು ಆಯೋಜಿಸುತ್ತಿದ್ದು

ಈ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶದಿಂದ 108 ಬೌದ್ಧ ದಿಕ್ಕುಗಳು ಆಗಮಿಸುತ್ತಿದ್ದಾರೆ, ಸಾವಿರಾರು ವರ್ಷಗಳ ನಂತರ ಮತ್ತೊಮ್ಮೆ ಪವಿತ್ರ ತ್ರಿಪೀಠಕ ಬುದ್ಧನ ಬೋಧನೆಗಳನ್ನು ಮತ್ತು ಅದರ ಮೂಲ ಪಾಲಿ ಭಾಷೆಯಲ್ಲಿ ಪಠಿಸಲಾಗುತ್ತಿದೆ, ಇದು ಶಾಂತಿ ಸಹಭಾಗಿತ್ವ ಮತ್ತು ಭಾತೃತ್ವ ತರುತ್ತದೆ, ಇಂತಹ ಸುಪ್ರಸಿದ್ಧ ಐತಿಹಾಸಿಕ ಸ್ಥಳವಾದ ಸನ್ನತಿಯು ವಿಶ್ವಶಾಂತಿ ಸ್ಥಾಪನೆಗಾಗಿ ನಡೆಯುವ ಈ ಪವಿತ್ರ ಪುಣ್ಯ ಕಾರ್ಯಕ್ರಮವು 12-02-2025 ರಂದು ಬೆಳಿಗ್ಗೆ 10ಗಂಟೆಗೆ ಸನ್ನತಿ ( ಕನಗನಹಳ್ಳಿ) ಮಹಾದ್ವಾರದಿಂದ ಬೌದ್ಧ ಮಹಾಸ್ತೂಪ ವರೆಗೆ ಧಮ್ಮ ಜಾಥಾ (ಚಾರಿಕ ) ಹಾಗೂ ಬೆಳಿಗ್ಗೆ 11ಗಂಟೆಗೆ ಬಿಕ್ಕುಗಳಿಗೆ ಸಂಘದಾನ, ಮಧ್ಯಾಹ್ನ 12 ಗಂಟೆಗೆ ಸರ್ವರಿಗೂ ಭೋಜನೆ, ಮಧ್ಯಾಹ್ನ12:30 ರಿಂದ 3:00 ಗಂಟೆವರೆಗೆ ಪವಿತ್ರ ತ್ರಿಪಿಟಕ ಪಠಣ, 3ಗಂಟೆಯಿಂದ 4ಗಂಟೆವರೆಗೆ ಧಮ್ಮ ಪ್ರವಚನ ಹಾಗೂ ಸಮಾರೋಪ ಸಮಾರಂಭ ಇರುತ್ತದೆ ಎಂದರು,ಈ ಸಂದರ್ಭದಲ್ಲಿ ಕಾಳಗಿ ತಾಲೂಕ ವತಿಯಿಂದ ಸುಮಾರು ನಾಲ್ಕು ಸಾವಿರ ಸರ್ವ ಬೌದ್ಧ ಉಪಸಕ/ ಉಪಾಸಕೀಯರು ಆಗಮಿಸಿ ಸದ್ದಮ ಕಾರ್ಯಕ್ರಮದ ಬೆಳವಣಿಗೆಯಲ್ಲಿ ಭಾಗವಹಿಸಿ ಎಂದು ಭಂತೇಜಿಯವರು ಕರೆ ನೀಡಿದರು, ಈ ಸಂದರ್ಭದಲ್ಲಿ ಸಂಘಟನಾಕರಾರು, ಬುದ್ಧನ ಅಭಿಮಾನಿಗಳು ಹಾಗೂ ಅನುವಾಯಿಗಳು, ಹಿರಿಯ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದರು,
ವರದಿ : ಹಣಮಂತ ಕುಡಹಳ್ಳಿ




