ಬೆಂಗಳೂರು : -ಬುದ್ಧನನ್ನು ಸಾಮಾನ್ಯ ವಾಗಿ ಬುದ್ಧ ಎಂದೂ ಕರೆಯಲಾಗುತ್ತದೆ, ಇದರರ್ಥ ನಿರ್ವಾಣ ಸ್ಥಿತಿಯನ್ನು ಸಾಧಿಸಿದ ನಂತರ ದುಃಖ ಮತ್ತು ಅಜ್ಞಾನದ ಸ್ಥಿತಿಯಿಂದ ಸ್ವಾತಂತ್ರ್ಯವನ್ನು ಪಡೆದ ಪ್ರಬುದ್ಧ. ಬುದ್ಧನು ಪೂರ್ವ ಭಾರತ ಉಪಖಂಡದ ಅಂಚಿನಲ್ಲಿ ರುವ ಹಿಮಾಲಯದ ತಪ್ಪಲಿನಲ್ಲಿರುವ ಸಾಮ್ರಾಜ್ಯದಲ್ಲಿ ಜನ್ಮತಾಳಿದರು ಎಂದು ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ಕಲಾ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಂಬಣ್ಣ.ಜಿ. ಮಹಾಗಾಂವಕರ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘ, ಬೆಂಗಳೂರು ನಗರ ಜಿಲ್ಲೆ ಮತ್ತು ಅಂಬಣ್ಣ.ಜಿ.ಮಹಾಗಾಂವಕರ್ ಕಲಾ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಫೌಂಡೇಶನ್, ರಾಜಾಜಿನಗರದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಬುದ್ದ ಪೂರ್ಣಿಮಾ ಅಂಗವಾಗಿ ಬುದ್ದ , ಬಸವ, ಅಂಬೇಡ್ಕರ್ ಜಯಂತಿ ನಿಮಿತ್ತ ಬುದ್ದ , ಬಸವ, ಅಂಬೇಡ್ಕರ್ ಈ ಮಹಾನಿಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಂಬಣ್ಣ ಮಹಾಗಾಂವಕರ್ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ ಅವರು ಸರ್ವರಿಗೂ ಸ್ವಾಗತ ಕೋರಿದರು.
ಬೆಂಗಳೂರು ನಗರ ಜಿಲ್ಲಾ ಗೌರವ ಅಧ್ಯಕ್ಷ ಕರಣಶೀಲ ಟಿ.ಮೌರ್ಯ ಮಾತನಾಡಿ
ಕನ್ನಡಕ್ಕೆ ದಕ್ಕಿದ ಮತ್ತೊಂದು ಭಾಗ್ಯವೆಂದರೆ ವಿದ್ವಾಂಸ ಎಲ್. ಬಸವರಾಜುರವರು ಬುದ್ಧಚರಿತವನ್ನು ಕನ್ನಡೀಕರಿಸಿದ್ದು. ಕನ್ನಡಿಗರಿಗೆ ಹೆಚ್ಚು ಪರಿಚಯವಿರುವ ಶಿವಶರಣರ ವಚನದ ಧಾಟಿಯನ್ನು ಅನುಸರಿಸಿ ಅವರು ಸರಳಗೊಳಿಸಿದ್ದು ಅವರ ವಿದ್ವತ್ಪ್ರತಿಭೆಗೆ ಸಾಕ್ಷಿ. ಬುದ್ಧನ ನುಡಿಗಳು, ಸಲಹೆ, ಮತ್ತು ಅವರ ವಾಣಿಗಳನ್ನು ಓದಿ ತಿಳಿದು ಕೊಳ್ಳ ಬೇಕು ಎಂದು ಕರಣಶೀಲ ಟಿ.ಮೌರ್ಯ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಡಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸುಧಾಕರ್.ಎಸ್.ಜಡಗಿ, ಉಪಾಧ್ಯಕ್ಷ ಭೀಮಾಶಂಕರ್ .ವಿ.ಟಿ, ಕಾರ್ಯಧ್ಯಕ್ಷ ಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೌರವಾಧ್ಯಕ್ಷ ವಿಠ್ಠಲ ಕವಳೆ, ಸಂಘಟನಾ ಕಾರ್ಯದರ್ಶಿ ಹನುಮಂತರಾಜು.ಟಿ.ಸಿ, ಹೊಂಬಾಳಯ್ಯ, ಪುಂಡಲಿಕ್, ಕಾರ್ಯದರ್ಶಿ ಕು.ಸೌಂದರ್ಯ, ಆದಿ ನಾರಾಯಣ, ಸೊಮಶೇಖರ್ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಮತ್ತು ಸಮಸ್ತ ನೌಕರರ ಬಂದು ಭಗನಿಯರು ಇದ್ದರು.
ವರದಿ:- ಅಯ್ಯಣ್ಣ ಮಾಸ್ಟರ್