Ad imageAd image

ಬಜೆಟ್ – 2024 : ಯಾವ ಕ್ಷೇತ್ರಕ್ಕೆ ಎಷ್ಟು ಹಣ : ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್..? 

Bharath Vaibhav
ಬಜೆಟ್ – 2024 : ಯಾವ ಕ್ಷೇತ್ರಕ್ಕೆ ಎಷ್ಟು ಹಣ : ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್..? 
WhatsApp Group Join Now
Telegram Group Join Now

ನವದೆಹಲಿ :  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರದ ಬಜೆಟ್‌ನ್ನು ಮಂಡಿಸಿದ್ದಾರೆ. ಎಲ್ಲರ ಚಿತ್ತವನ್ನು ಕದಿದ್ದ ಬಜೆಟ್‌ನಲ್ಲಿ ನಿರ್ಮಲಾ, ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ದೇಶದ ರಕ್ಷಣಾ ವಿಭಾಗದ ಬಲವರ್ಧನೆಗೆ ಆದ್ಯತೆ ನೀಡಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಕೃಷಿಯಲ್ಲಿ ಸಂಶೋಧನೆಯನ್ನು ಪರಿವರ್ತಿಸಲು, ತಜ್ಞರನ್ನು ಮೇಲ್ವಿಚಾರಣೆ ಮಾಡಲು ಮತ್ತು ಹವಾಮಾನಕ್ಕೆ ಅನುಗುಣವಾಗಿ ಹೊಸ ತಳಿಗಳನ್ನು ಉತ್ತೇಜಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

ಬೇಳೆಕಾಳುಗಳು ಮತ್ತು ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಸರ್ಕಾರ ಒತ್ತು ನೀಡಲಿದೆ. ಇದಕ್ಕಾಗಿ ಉತ್ಪಾದನೆ, ಸಂಗ್ರಹಣೆ ಮತ್ತು ಮಾರುಕಟ್ಟೆಗೆ ಒತ್ತು ನೀಡಲಾಗುವುದು. ವಿಶೇಷವಾಗಿ ಸಾಸಿವೆ, ಶೇಂಗಾ, ಸೂರ್ಯಕಾಂತಿ, ಸೋಯಾಬೀನ್ ಮುಂತಾದ ಬೆಳೆಗಳ ಉತ್ಪಾದನೆಗೆ ಸರ್ಕಾರ ಒತ್ತು ನೀಡಲಿದೆ ಎಂದು ಬಜೆಟ್‌ ವೇಳೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.

ಶಿಕ್ಷಣ, ಉದ್ಯೋಗ ಕ್ಷೇತ್ರಕ್ಕೆ ಎಷ್ಟು?

ಪ್ರಧಾನಮಂತ್ರಿ ಪ್ಯಾಕೇಜ್ ಅಡಿಯಲ್ಲಿ 2 ಲಕ್ಷ ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ 5 ಯೋಜನೆಗಳನ್ನು ಅವರು ಘೋಷಿಸಿದರು. ಹಣಕಾಸು ಸಚಿವರು ಈ ವರ್ಷ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ 1.48 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ.

ವಿತ್ತ ಸಚಿವರು ಮುದ್ರಾ ಸಾಲದ ಮೊತ್ತವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಿದ್ದಾರೆ. ಸಾಲ ಪಡೆದು ಸ್ವಂತ ಉದ್ಯಮ ಸ್ಥಾಪಿಸಲು ಬಯಸುವ ಯುವಕರಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ, 500 ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸುತ್ತದೆ. ಇದರಲ್ಲಿ ತಿಂಗಳಿಗೆ 5000 ರೂ.ಗಳ ಇಂಟರ್ನ್‌ಶಿಪ್ ಭತ್ಯೆ ಮತ್ತು 6000 ರೂ.ಗಳ ಏಕರೂಪದ ಸಹಾಯವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ

     ಕ್ಷೇತ್ರ.     ಕೋಟಿ ರೂ.

1. ರಕ್ಷಣಾ 4,54,773

2. ಗ್ರಾಮೀಣಾಭಿವೃದ್ಧಿ 2,65,808

3. ಕೃಷಿ 1,51,851

4. ಗ್ರಹ ವ್ಯವಹಾರಗಳ ಸಚಿವಾಲಯ 1,50,983

5. ಶಿಕ್ಷಣ 1,25,638

6. ಐಟಿ ಹಾಗೂ ಟೆಲಿಕಾಂ 1,16,342

7. ಆರೋಗ್ಯ 89,287

8. ಇಂಧನ 68,769

9. ಸಮಾಜ ಕಲ್ಯಾಣ 56,501

10. ಕಾಮರ್ಸ್‌ ಹಾಗೂ ಇಂಡಸ್ಟ್ರಿ 47,559

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!