ಬೆಳಗಾವಿ: ಇದು ಕೇವಲ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರಿಗೆ ಮಾತ್ರ ಐತಿಹಾಸಿಕ ಬಜೆಟ್ ಹೊರತು ಅತಿಥಿ ಶಿಕ್ಷಕರಿಗೆ ಅಲ್ಲ.
ಸುಮಾರು ದಶಕಗಳಿಂದ ಹೋರಾಟಗಳ ಮೇಲೆ ಹೋರಾಟಗಳನ್ನು ಕೈಗೊಳ್ಳುತ್ತಾ ಬಂದರೂ ಸಹ ಅತಿಥಿ ಶಿಕ್ಷಕರ ಬಾಳಿಗೆ ಬೆಳಕಾಗದೆ ಅಳುವ ಮಕ್ಕಳ ಕೈಯಲ್ಲಿ ಮಿಠಾಯಿ ನೀಡಿದಂತೆ ಅತಿಥಿ ಶಿಕ್ಷಕರ ಸಂಬಳವನ್ನು 2,000 ಸಾವಿರ ಕ್ಕೇರಿಸಿ ಸಂತೃಪ್ತಿ ಪಡಿಸಲು ಹೊರಟಿರುವ ಅಸಂವಿಧಾನಿಕ ಸರ್ಕಾರ.
ಪ್ರತಿವರ್ಷ ಅತಿಥಿ ಶಿಕ್ಷಕರಿಂದ ಸರ್ಕಾರಕ್ಕೆ ನೂರಾರು ಕೋಟಿಗಳಷ್ಟು ಲಾಭವಾದರೂ ಸಹಿತ ಕನಿಷ್ಠ ಕೂಲಿಯನ್ನು ನೀಡದ ಸರ್ಕಾರ. ಇಂತಹ ಒಂದು ಸರ್ಕಾರದ ಮೇಲೆ ಭರವಸೆಯನಿಟ್ಟು ಕರ್ನಾಟಕದ ಆದ್ಯಂತ ಸರಿ ಸುಮಾರು 43000 ಸಾವಿರ ಅತಿಥಿ ಶಿಕ್ಷಕರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಇದೇ ಕಾಂಗ್ರೆಸ್ ಸರ್ಕಾರದ ನಾಯಕರು ಬಂದು ನಮ್ಮ ಹೋರಾಟದಲ್ಲಿ ಭಾಗಿಯಾಗಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಅತಿಥಿ ಶಿಕ್ಷಕರಿಗೆ ಒಂದು ನೆಲೆ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.ಮತ್ತು ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲೂ ಸಹಿತ ಅದನ್ನ ಉಲ್ಲೇಖಿಸಿದ್ದಾರೆ.
ಇಂತಹ ನಮ್ಮ ಆಳುವ ಪ್ರಜಾಪ್ರಭುತ್ವ ಸರ್ಕಾರದ ನಾಯಕರುಗಳ ಮಾತುಗಳನ್ನು ನಂಬಿ ನಾವು ಇಡೀ ಕರ್ನಾಟಕ ರಾಜ್ಯದ್ಯಂತ 43000 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವುದು ದುಸ್ಥಿತಿಯೇ ಸರಿ.
ಬಂದಿಖಾನೆಯಲ್ಲಿ ಬಂಧಿಯಾಗಿರುವಂತಹ ಕೈದಿಗೆ ಇರುವಂತಹ ಸಂಬಳ ಒಬ್ಬ ನಾಡು ಕಟ್ಟುವ ಶಿಕ್ಷಕನಿಗಿಲ್ಲದೆ ಸರ್ಕಾರದ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವುದೇ ದುಃಖದ ಸಂಗತಿಯೇ ಸರಿ.
ಈ ಅತಿಥಿ ಶಿಕ್ಷಕ ಸಮಾಜದಲ್ಲಿ ಮಾತ್ರ ಸ್ವತಂತ್ರ ಆದರೆ ಸರ್ಕಾರದ ರೀತಿಯಲ್ಲಿ ಮಾತ್ರ ಅತಂತ್ರ.ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಕಾರ್ಯಧ್ಯಕ್ಷರು ಪ್ರದೀಪ್ ಮಾಳಿ.
ವರದಿ ರಾಜು ಮುಂಡೆ




