ಹಾನಗಲ್ : ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಇಟ್ಟಿದ್ದ ನಾಡ ಬಾಂಬ್ ಸ್ಫೋಟಗೊಂಡ ಪರಿಣಾಮ ಎಮ್ಮೆಯೊಂದು ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೀರೂರು ಗ್ರಾಮದಲ್ಲಿ ನಡೆದಿದೆ..
ಹೌದು ಶಿವನಗೌಡ ಪಾಟೀಲ್ ಎಂಬುವರಿಗೆ ಸೇರಿದ ಮಾವಿನ (ಹೊಲ) ಕೊಪ್ಪಲದಲ್ಲಿ ಯಾರೋ ಕಿಡಿಗೇಡಿಗಳು ನಾಡ ಬಾಂಬ್ ಇಟ್ಟಿದ್ದಾರೆ. ಶುಕ್ರವಾರ ಮದ್ಯಾಹ್ನ ಮೇವು ತಿಂದ ಎಮ್ಮೆ ನೀರು ಕುಡಿಯಲು ಅಂತ ತೆರಳುವ ವೇಳೆ ನಾಡ ಬಾಂಬ್ ನ್ನು ಕಚ್ಚಿದೆ, ಪರಿಣಾಮ ನಾಡ ಬಾಂಬ್ ಸ್ಫೋಟಗೊಂಡಿದೆ, ಸ್ಫೋಟದಿಂದ ಎಮ್ಮೆಯ ಬಾಯಿ ಛಿದ್ರವಾಗಿ ರಕ್ತಸ್ರಾವದಿಂದ ಸಾವು ಬದುಕಿನ ನಡುವೆ ನರಳಾಡುತ್ತಿದೆ.
ಇನ್ನೂ ಗಂಭೀರವಾಗಿ ಗಾಯಗೊಂಡ ಎಮ್ಮೆ ಗ್ರಾಮದ ಷಣ್ಮುಖಗೌಡ ಪಾಟೀಲ್ ರೈತನದು ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಹಾನಗಲ್ ಪೊಲೀಸ್ ಠಾಣೆ ಪಿಎಸ್ಐ ಸಂಪತ್ ಆನಿಕಿವಿ ಮತ್ತು ಸಿಬ್ಬಂದಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಈ ಹಿಂದೆಯೂ ಇದೇ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶೇಕಪ್ಪ ರವರಿಗೆ ಸೇರಿದ ಎರೆಡು ಹೋರಿಗಳು ನಾಡಬಾಂಬ್ ಸ್ಫೋಟದಿಂದ ಮೃತಪಟ್ಟಿದ್ದು ಇರುತ್ತದೆ.
ಇನ್ನೂ ಪೊಲೀಸರು ನಾಡ ಬಾಂಬ್ ಇಟ್ಟ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಏನು ತಿಳಿಯದ ಮುಗ್ದ, ಮೂಖ ಪ್ರಾಣಿಗಳ, ಪ್ರಾಣದ ಜೊತೆಗೆ ಚಲ್ಲಾಟ ಆಡುತ್ತಿರುವ, ಮಾನವೀಯತೆನೆ ಇಲ್ಲದ ಇಂತಹ ನೀಚ ಕೃತ್ಯ ಎಗುವ ಕಿಡಿಗೇಡಿಗಳನ್ನು ಕಂಬಿ ಏಣಿ ಸುವಂತೆ ಮಾಡಬೇಕಾಗಿದೆ.
ವರದಿ :ರಮೇಶ್ ತಾಳಿಕೋಟಿ




