Ad imageAd image

ಪಟ್ಟಣಕ್ಕೆ ಬುಖಾರಿ ಕೊಡುಗೆ ಅಪಾರ:ಮಾಜಿ ಸಚಿವ ರಾಜಶೇಖರ್ ಪಾಟೀಲ ಅಭಿಮತ

Bharath Vaibhav
ಪಟ್ಟಣಕ್ಕೆ ಬುಖಾರಿ ಕೊಡುಗೆ ಅಪಾರ:ಮಾಜಿ ಸಚಿವ ರಾಜಶೇಖರ್ ಪಾಟೀಲ ಅಭಿಮತ
WhatsApp Group Join Now
Telegram Group Join Now

ಚಿಟಗುಪ್ಪ :-ಪಟ್ಟಣಕ್ಕೆ ದಿವಂಗತ ಶಾನ್ ಉಲ್ ಹಕ್ ಬುಖಾರಿ ಅವರ ಕೊಡುಗೆ ಅಪಾರವಾದದು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದರು.ಚಿಟಗುಪ್ಪ ತಾಲೂಕು ನಾಗರೀಕರ ಹಿತರಕ್ಷಣಾ ಸಮಿತಿಯಿಂದ ಗುರುವಾರ ರಾತ್ರಿ ಇತ್ತೀಚೆಗೆ ನಿಧನರಾದ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಶಾನ್ ಉಲ್ ಹಕ್ ಬುಖಾರಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಚಿಟಗುಪ್ಪ ತಾಲ್ಲೂಕು ಕೇಂದ್ರವಾಗಲು ಬುಖಾರಿ ಕೊಡುಗೆ ಸಾಕಷ್ಟಿದೆ.ರಾಜಕೀಯವಾಗಿ ಬೇರೆ ಪಕ್ಷದಲ್ಲಿ ಇದ್ದರೂ ಕೂಡ ನನ್ನ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು.ಅಲ್ಲದೇ ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುವಂತಹ ಮನಸ್ಥಿತಿ ಬುಖಾರಿ ಅವರದಾಗಿತ್ತು.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ,ಅವರ ಕುಟುಂಬದವರ ಜೊತೆಗೆ ಯಾವಾಗಲೂ ಇರುತ್ತೆವೆ ಎಂದು ಹೇಳಿದರು.

ಸುಭಾಸ್ ಕಲ್ಲೂರ್,ಬಸವಂತರಾಯ ದೇಶಮುಕ್,ಮೌಲಾನಾ ತಸದ್ಭಾಕ್ ನದ್ದಿ,ರಾಶೀದ ಪಟೇಲ್ ಸೇರಿದಂತೆ ಅನೇಕರು ಶಾನ್ ಉಲ್ ಹಕ್ ಬುಖಾರಿ ಅವರ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಬೀದರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್,ವೀರಣ್ಣ ಪಾಟೀಲ್,ಬಸವರಾಜ ಪಾಟೀಲ್ ಬೆಳಕೇರಾ, ಭಯ್ಯಾ ಪಟೇಲ್,ಭದ್ರೇಶ್ ಪಾಟೀಲ್,ಅಫರ್ ಮಿಯಾ,ಸೂರ್ಯಕಾಂತೆ ಮಠಪತಿ,ಮುಜಾಹಿದ್ ಪಾಠಾ ಖುರೇಶಿ,ಮುಜಫರ್ ಪಟೇಲ್, ನ್ಯಾಯವಾದಿ ಶ್ರೀಕಾಂತ,ಮೈನೋದ್ದೀನ್ ಲಾಠೋಡಿ,ಸಾಲ್ಲಾವುದ್ದಿನ ಸಿದ್ದಿಕಿ,ನಿಜಾಮ್ ಹಕೀಮ ಸೇರಿದಂತೆ ಮುಖಂಡರು,ಪುರಸಭೆ ಸದಸ್ಯರು ಹಾಗೂ ಶಾನ್ ಉಲ್ ಹಕ್ಕ ಬುಖಾರಿ ಪುತ್ರರು,ಪಟ್ಟಣದ ನಿವಾಸಿಗಳಿದ್ದರು.

 ವರದಿ:-  ಸಜೀಶ ಲಂಬುನೋರ್ 

WhatsApp Group Join Now
Telegram Group Join Now
Share This Article
error: Content is protected !!