ಸಿಂಧನೂರು : ಜನವರಿ 30 ರಾಯಚೂರು ಜಿಲ್ಲೆಯ ಲಿಂಗಸುಗೂರು ನಿವಾಸಿಯಾದ ಸೀಪಾ 24 ಸಿಂಧನೂರು ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಾವಿದ್ಯಾಲಯದಲ್ಲಿ ಎಂ ಎಸ್ ಸಿ, ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಲಿಂಗಸೂಗೂರಿನ ಪರಿಚಯಸ್ತ ಟೈಲ್ಸ್ ಕೆಲಸ ಮಾಡುತ್ತಿದ್ದ ಮುದಿನ್ ಕೆಲವು ತಿಂಗಳುಗಳಿಂದ ನನ್ನನ್ನು ಪ್ರೀತಿ ಮಾಡು ಅಂತ ಹಿಂದೆ ಬಿದ್ದಿದ್ದನು ಅಂತ ಕೇಳಿ ಬಂದಿದೆ ವಿದ್ಯಾರ್ಥಿನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸೀಪಾ ಕಾಲೇಜಿಗೆ ಬಂದಾಗ ಗೌತಮ್ ಸೇಟ್ ಲೇಔಟಿನ ಹತ್ತಿರ ಕರೆದುಕೊಂಡು ಹೋಗಿ ಕುತ್ತಿಗೆಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಕೆಲವು ದಿನಗಳ ಹಿಂದೆ ವಿದ್ಯಾರ್ಥಿನಿಗೆ ಮದುವೆ ನಿಶ್ಚಯ ವಾಗಿತ್ತಂತೆ ಕೆಲ ತಿಂಗಳ ಹಿಂದೆ ಪರಿಚಯವಾದ ಮುದಿನ್ ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಆರೋಪಿ ಮುದಿನ್ ಲಿಂಗಸುೂಗೂರು ಪೊಲೀಸ್ ಸ್ಟೇಷನ್ ನಲ್ಲಿ ಸರಂಡರ್ ಆಗಿದ್ದಾನೆ
ವರದಿ: ಬಸವರಾಜ ಬುಕ್ಕನಹಟ್ಟಿ