ಬೆಳಗಾವಿ : ಮುಲ್ಲಾ ಪ್ಲಾಟ್ ನಿವಾಸಿ ಹಾಗೂ ಗ್ರಾನೈಟ್ ಉದ್ಯಮಿಯೂ ಆಗಿದ್ದ ಫೈರೋಜ್ ಬಡಗಾಂವಿ (40) ಎಂಬುವವರ ಶವ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದೆ.
ಚಿಕ್ಕೋಡಿಯ ಜೈನಾಪೂರ ಗ್ರಾಮದ ಹೊರವಲಯದ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಶವ ಪತ್ತೆಯಾಗಿದೆ.ಕಾರು ಅಪಘಾತವಾಗಿ ನಂತರ ಬೆಂಕಿಹೊತ್ತಿಕೊಂಡು ಫೈರೋಜ್ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆದರೆ ಕೊಲೆಯ ಅನುಮಾನವೂ ವ್ಯಕ್ತವಾಗುತ್ತಿದ್ದು, ಮೃತ ಪೈರೋಜ್ ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ FSL ತಂಡವೂ ಭೇಟಿ ನೀಡಿ ಪರಿಶೀಲಿಸಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.