Ad imageAd image

ಐಟಿಐ ತರಬೇತಿದಾರರು ಬಿಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಉದ್ಯಮಿ ರವೀಂದ್ರ ದೇಸಾಯಿ

Bharath Vaibhav
ಐಟಿಐ ತರಬೇತಿದಾರರು ಬಿಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಉದ್ಯಮಿ ರವೀಂದ್ರ ದೇಸಾಯಿ
WhatsApp Group Join Now
Telegram Group Join Now

ಅಥಣಿ:- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ ತರಬೇತಿದಾರರು ಬಿಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಉದ್ಯಮಿ ರವೀಂದ್ರ ದೇಸಾಯಿ ಮಾತನಾಡಿದರು.ಪ್ರತಿಯೊಬ್ಬ ತರಬೇತಿದಾರರು ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆಯನ್ನು ಬಿಟ್ಟು ಆತ್ಮಗೌರವವನ್ನು ಇಟ್ಟುಕೊಂಡು ಕೆಲಸ ಮಾಡಿ, ಬದುಕು ಉನ್ನತಿಯ ಹಾದಿಗೆ ತಲುಪುತ್ತದೆ ಎಂದು ಉದ್ಯಮಿ ಹಾಗೂ ಸಮಾಜಸೇವಕ ರವೀಂದ್ರ ದೇಸಾಯಿ ಹೇಳಿದರು.

ಅವರು ಗುರುವಾರ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸನ್ 2022-24 ಸಾಲಿನ ಐಟಿಐ ಎಲೆಕ್ಟ್ರಿಷಿಯನ್ ಮತ್ತು ಪೀಟರ್ ವಿಭಾಗದ ತರಬೇತಿದಾರರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಐಟಿಐ ತರಬೇತಿ ಹೊಂದಿದ ತರಬೇತಿದಾರರಿಗೆ ಅನೇಕ ವಲಯಗಳಲ್ಲಿ ಉದ್ಯೋಗಾವಕಾಶಗಳು ದೊರಕುತ್ತವೆ. ಈ ತರಬೇತಿಯನ್ನು ಪಡೆದವರು ಸ್ವಯಂ ಉದ್ಯೋಗ ಕೈಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಎಸ್ ಎಮ್ ನಡುವಿನಮನಿ ಮಾತನಾಡಿ ಐಟಿಐ ಎನ್ನುವುದು ಒಂದು ಕೌಶಾಲ್ಯಾಧಾರಿತ ಶಿಕ್ಷಣವಾಗಿದೆ. ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಇರುವ ಮಹತ್ವ ಅಷ್ಟಿಷ್ಟಲ್ಲ. ಕೇವಲ ವೈದ್ಯರು, ಇಂಜಿನಿಯ‌ರ್ ವೃತ್ತಿ ಸೇರಿದಂತೆ ಇತರೆ ಉದ್ಯೋಗಗಳನ್ನು ಪಡೆಯುವ ದೃಷ್ಠಿಯಿಂದ ಶಿಕ್ಷಣದತ್ತ ದಾಪುಗಾಲಿಡುವ ವಿದ್ಯಾರ್ಥಿಗಳ ನಡುವೆ ಐಟಿಐ ತರಬೇತಿಗೆ ಬರುವ ವಿದ್ಯಾರ್ಥಿಗಳು ದೇಶದ ಅಭಿವೃದ್ದಿಗೆ ವಿಶೇಷ ಕೊಡುಗೆಯನ್ನು ನೀಡಲಿದ್ದಾರೆ ಎಂದು ಬಣ್ಣಿಸಿದರು.

ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠ ಮಾತನಾಡಿ ಮನುಷ್ಯನಿಗೆ ಹಣ ಮತ್ತು ವಿದ್ಯೆ ಎಂಬುದು ಜೀವನದಲ್ಲಿ ಅತ್ಯಮೂಲ್ಯ ಸಂಪತ್ತಾಗಿದೆ. ನಾವು ಸಂಪಾದನೆ ಮಾಡಿದ ಹಣವನ್ನು ಯಾರಾದರೂ ಅಪಹರಿಸಬಹದು. ಆದರೆ ನಾವು ಕಲಿತಿರುವ ಜ್ಞಾನವನ್ನು ಯಾರೊಬ್ಬರೂ ಕದಿಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಸರ್ಕಾರ ನಿಗದಿಪಡಿಸಿದ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಾತ್ಮಕ ತರಬೇತಿ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿಗಳ ಕಾರ್ಯ ಮೆಚ್ಚುವಂತಹದ್ದು. ತರಬೇತಿ ಪಡೆದ ತರಬೇತಿದಾರರು ಹಲವು ವಲಯಗಳಲ್ಲಿ ಉದ್ಯೋಗವಕಾಶಗಳನ್ನು ಪಡೆಯಬಹುದು, ಇಲ್ಲವೇ ಉನ್ನತ ಶಿಕ್ಷಣ ಪಡೆದು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು. ತಾವು ಎಷ್ಟೇ ಎತ್ತರ ಮಟ್ಟಕ್ಕೆ ಬೆಳೆದರೂ ನಿಮಗೆ ಶಿಕ್ಷಣ ನೀಡಿದ ಶಿಕ್ಷಕರನ್ನ ಮತ್ತು ತಮಗೆ ಜನ್ಮ ನೀಡಿ ಪೋಷಣೆ ಮಾಡಿ ಶಿಕ್ಷಣ ಕೊಡಿಸಿದ ತಂದೆ ತಾಯಿಯ ಋಣ ಮನ್ನಾ ಮರಿಯಬಾರದು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಂ ಆರ್ ಸೂವಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತರಬೇತಿ ಉಪನ್ಯಾಸಕ ಎಂ ಎ ನದಾಫ್ ಮಾತನಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಕಳೆದ ಎರಡು ವರ್ಷಗಳಿಂದ ಎಪಿಎಂಸಿ ಕಟ್ಟಡದಲ್ಲಿ ನಡೆಸುವ ಮೂಲಕ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆ ವಿದ್ಯಾರ್ಥಿಗಳು ಎಲೆಕ್ಟ್ರಿಷಿಯನ್ ಮತ್ತು ಪೀಟರ್ ವಿಭಾಗದಲ್ಲಿ ಗುಣಾತ್ಮಕ ತರಬೇತಿಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎ ಬಿ ಹೊಸಮನಿ, ಅಣ್ಣಾಸಾಬ ತೆಲಸoಗ, ರಾಜು ವಾಘಮೋರೆ, ಜೆ. ಡಿ. ಬೈರಶೆಟ್ಟಿ, ಎಂ ಎಂ ಆನಂದಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೆ ಆರ್ ಜಂಬಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ: -ರಾಜು.ಎಮ್. ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!