ಆರೋಗ್ಯ ತಜ್ಞರ ಸಲಹೆಯ ಪ್ರಕಾರ, ದಿನಕ್ಕೆ 1ರಿಂದ 2 ಗ್ಲಾಸ್ ಮಜ್ಜಿಗೆ ಕುಡಿಯುವುದು ಒಳ್ಳೆಯದು. ಇದು ದೇಹಕ್ಕೆ ತಂಪಾಗಿ ಹಾಗೂ ಸರಾಗವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಜ್ಜಿಗೆ ಕುಡಿಯುವುದರಿಂದ ಇತರ ಆರೋಗ್ಯ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ.
ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಮೊಸರು ತಣ್ಣನೆಯ ಗುಣವನ್ನು ಹೊಂದಿರುತ್ತದೆ. ಶಾಖದಿಂದ ರಕ್ಷಿಸಲು ಇದು ಉಪಯುಕ್ತವಾಗಿದೆ. ಮೊಸರು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಕರುಳಿನ ಆರೋಗ್ಯ ಮತ್ತು ಇತರ ಹಲವು ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.
ಮೊಸರಿನಲ್ಲಿ ಬಹಳಷ್ಟು ಪೋಷಕಾಂಶಗಳಿವೆ. ಇದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾದ ಒಳ್ಳೆಯ ಬ್ಯಾಕ್ಟೀರಿಯಾ ಹೊಂದಿರುತ್ತದೆ. ಮೊಸರು ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯಕವಾಗಬಹುದು. ‘ಜರ್ನಲ್ ಆಫ್ ನ್ಯೂಟ್ರಿಷನ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದಿನಕ್ಕೆ ಎರಡು ಬಾರಿ 200 ಗ್ರಾಂ ಮೊಸರು ಸೇವಿಸುವ ಜನರು ತಮ್ಮ ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.