ಹೈದರಾಬಾದ್: ಬಂಗಾರದ ಬೆಲೆಗಳು ಇಳಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ. ಅಂದ ಹಾಗೆ, ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದರೆ, ಬೆಳ್ಳಿಯ ಬೆಲೆ ಸ್ಥಿರವಾಗಿದೆ. ಶನಿವಾರ 10 ಗ್ರಾಂ ಚಿನ್ನದ ಬೆಲೆ 92,040 ರೂ. ಇತ್ತು. ಆದರೆ, ಭಾನುವಾರದ ವೇಳೆಗೆ 360 ರೂ.ಗಳಷ್ಟು ಏರಿಕೆಯಾಗಿ 92,400 ರೂ.ಗೆ ಹೆಚ್ಚಳಗೊಂಡಿದೆ. ಇನ್ನು ನಿನ್ನೆ ಪ್ರತಿ ಕೆಜಿ ಬೆಳ್ಳಿಯ ಬೆಲೆ ರೂ.1,02,684 ರೂ ಆಗಿತ್ತು. ಭಾನುವಾರವೂ ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಭಾನುವಾರ ಬೆಂಗಳೂರಲ್ಲಿ ಹೇಗಿದೆ ಚಿನ್ನದ ಬೆಲೆ: ಬೆಂಗಳೂರಿನಲ್ಲಿ ಇಂದು 99.9 ಪ್ಯೂರಿಟಿಯ 10 ಗ್ರಾಂ ಬಂಗಾರದ ಬೆಲೆ 92,400 ಇದೆ. ನಿನ್ನೆಯ ಬೆಲೆಗೆ ಹೋಲಿಸಿದರೆ 360 ರೂ ಏರಿಕೆ ಆಗಿದೆ. ಇನ್ನು ಬೆಳ್ಳಿ ಬೆಲೆ ಸಹ 1,02,684 ರೂ ಇದೆ.
ಹೈದರಾಬಾದ್ನಲ್ಲೂ ಚಿನ್ನದ ಬೆಲೆ ರೂ.92,400 ನಿಗದಿಯಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ ರೂ.1,02,684. ಇದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ. ಗಮನಿಸಬಹುದು.
ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸ್ಥಿರವಾಗಿವೆ. ಭಾನುವಾರ ಒಂದು ಔನ್ಸ್ ಚಿನ್ನದ ಬೆಲೆ 3084 ಡಾಲರ್ ಆಗಿತ್ತು. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 34.14 ಡಾಲರ್ ಆಗಿದೆ.